ಪ್ರಮುಖ ಸುದ್ದಿ
ಗಾಂಧಿಗಳು ಇಲ್ಲಾ ಅಂದ್ರೆ ಕಾಂಗ್ರೆಸ್ ಉಳಿಯಲ್ಲ-ಸೋನಿಯಾ ಗಾಂಧಿ
ದೆಹಲಿಃ ಗಾಂಧಿಗಳು ಇಲ್ಲದಿದ್ರೆ ಕಾಂಗ್ರೆಸ್ ಪಕ್ಷ ಉಳಿಯಲ್ಲ ಎಂದು ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಈ ಗಾಂಧಿ ಮನೆತನದವರು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸದಿದ್ದರೆ, ಕಾಂಗ್ರೆಸ್ ಪಕ್ಷವೇ ಇರುತ್ತಿರಲಿಲ್ಲ ಎಂಬ ಧಾಟಿಯಲ್ಲಿ ಹೇಳಿಕೆಯನ್ನು ಅವರು ನೀಡಿದ್ದಾರೆ.
ಅವರ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದ ಹಲವಾರು ಹಿರಿಯ ನಾಯಕರು ಮುಜಗರ ವ್ಯಕ್ತಪಡಿಸಿದ್ದು, ಬಹಿರಂಗ ಹೇಳಿಕೆ ನೀಡಲು ಬಹುತೇಕರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಸೋನಿಯಾ ಗಾಂಧಿಯವರು ದಿಢೀರನೆ ಈ ಹೇಳಿಕೆ ನೀಡಲು ಯಾವ ಕಾರಣವಿದೆ ಉದ್ದೇಶವೇನಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಈ ಹೇಳಿಕೆ ಕಾಂಗ್ರೆಸ್ ನಲ್ಲಿ ಯಾರಿಗೆ ಬಿಸಿ ಮುಟ್ತಟಿಸಲಿದೆ ಎಂಬುದು ಕಾದು ನೋಡಬೇಕು.