ಪ್ರಮುಖ ಸುದ್ದಿ
ನಮ್ಮ ಸಂವಿಧಾನ ಜಗತ್ತಿನಲ್ಲಿಯೇ ಉತ್ತಮವಾದದುಃ ಮೋದಿ
ದೆಹಲಿಃ ನಮ್ಮ ದೇಶದ ಸಂವಿಧಾನ ಜಗತ್ತಿನಲ್ಲಿಯೇ ಅತ್ಯುತ್ತಮ ವಾದದು ಎಂದು ಪ್ರಧಾನಿ ಮೋದಿ ಹೇಳಿದರು.
ಸಂಸತ್ತಿನ ಟೌನ್ ಹಾಲ್ ನಲ್ಲಿ ಭಾಷಣ ಮಾಡುತ್ತಿದ್ದ ಅವರು, ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಕಲ್ಪಿಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ.
ದೇಶದ ಹಲವು ಪ್ರದೇಶಗಳು ಅಭಿವೃದ್ಧಿ ಹೊಂದಿವೆ ಇನ್ನೂ ಕೆಲವು ಹಿಂದುಳಿದಿವೆ ಈ ಅಸಮತೋಲನೆ ನಿವಾರಿಸಲು ಮುಂದಾಗಬೇಕಿದೆ.
ಜನಪ್ರತಿನಿಧಿಗಳು ಜನರ ಜೊತೆ ಬೆರೆತಾಗ ಅಭಿವೃದ್ಧಿ ಸಾಧ್ಯ ಇದನ್ನು ಅರಿತು ನಡೆಯಬೇಕು. ಸಾಮಾಜಿಕ ನ್ಯಾಯದಡಿ ಎಲ್ಲರೂ ಸಮಾನರು ಎಂದರು.