ಪೊಲೀಸ್ ಪೇದೆ ಹಲ್ಲೆಯಿಂದ ಅವಮಾನಗೊಂಡ ವ್ಯಕ್ತಿ ಆತ್ಮಹತ್ಯೆಗೆ ಯತ್ನ.!
ಎಮ್ಮೆಗೆ ಗಾಯವಾದರೆ ಕೋಣಕ್ಕೆ ಬರೆ ಎಳೆದರಂತೆ..?
ಯಾದಗಿರಿಃ ಪೊಲೀಸ್ ಪೇದೆಯಿಂದ ಹಲ್ಲೆಗೊಳಗಾದ ವ್ಯಕ್ತಿಯೋರ್ವ ಅವಮಾನಗೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜೆಲ್ಲೆಯ ವಡಿಗೇರಾ ತಾಲೂಕಿನ ಹಾಳಗೇರ ಗ್ರಾಮದಲ್ಲಿ ನಿನ್ನೆ ಶನಿವಾರ ರಾತ್ರಿ ನಡೆದಿದೆ.
ವೆಂಕಯ್ಯ ಕಲಾಲ್ ಎಂಬ ವ್ಯಕ್ತಿಯೇ ಪೊಲೀಸ್ ಪೇದೆಯಿಂದ ಹಲ್ಲೆಗೊಳಗಾಗಿದ್ದು, ಪ್ರಸ್ತುತ ಸಮೀಪದ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾನೆ.
ವಡಿಗೇರಾ ಪೊಲೀಸ್ ಠಾಣೆಯ ಪೇದೆ ರಾಮುಲು ಎಂಬುವರು ರಾತ್ರಿ ಗಸ್ತಿನಲ್ಲಿರುವಾಗ, ವೆಂಕಯ್ಯ ಎಂಬ ವ್ಯಕ್ತಿಗೆ ಸಂಬಂಧಿಸಿದ ಜಮೀನಿನಲ್ಲಿ ಯಾರೋ ಮರಳು ಸಂಗ್ರಹ ಮಾಡಿದ್ದು ಕಂಡು ಬಂದಿದೆ. ಆಗ ಪೊಲೀಸ್ ಪೇದೆ ನಿನ್ನ ಹೊಲದಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮಾಡಿ ಮಾರಾಟ ಮಾಡುತ್ತಿದ್ದು, ಮರಳು ನನ್ನದಲ್ಲ ಎಂದು ಸುಳ್ಳು ಹೇಳುತ್ತಿಯ ಎಂದು ತಳಿಸಿದ್ದಾನೆ ಎನ್ನಲಾಗಿದೆ.
ಈ ಕಾರಣ ನೊಂದ ವ್ಯಕ್ತಿ ತಾನು ಮರಳು ಸಂಗ್ರಹ ಮಾಡಿಲ್ಲ ನನ್ನ ಜಮೀನಿನಲ್ಲಿ ಯಾರು ಮರಳನ್ನು ರಾತ್ರಿ ಡಂಪ್ ಮಾಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ ಎಂದು ಹೇಳಿದರು ಪೊಲೀಸ್ ತಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಧ್ಯ ಹಲ್ಲೆಗೊಳಗಾದ ವ್ಯಕ್ತಿ ವೆಂಕಯ್ಯ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.