ಪ್ರಮುಖ ಸುದ್ದಿ
ರಾಜ್ಯದ ಹಲವಡೆ ಭಾರಿ ಮಳೆ, ಬುಲೆಟ್ ತರಹ ಬಿದ್ದ ಆಲಿಕಲ್ಲು, ಬೆಚ್ಚಿಬಿದ್ದ ಜನತೆ
ಚಿಕ್ಕಮಂಗಳೂರಃ ಬೆಂಗಳೂರ ಸೇರಿದಂತೆ ರಾಜ್ಯದ ಹಲವಡೆ ಗುಡುಗು ಸಿಡಿಲು ಮಿಂಚಿನ ಆರ್ಭಟದೊಂದಿಗೆ ಮಳೆ ಸುರಿದರೆ, ಚಿಕ್ಕಮಂಗಳೂರಿನಲ್ಲಿ ದೊಡ್ಡ ದೊಡ್ಡ ಗಾತ್ರದ ಆಲಿಕಲ್ಲು ಸಮೇತ ಭಾರಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ವಾಹನ ಸವಾರರು ಪರದಾಡುವಂತಾಗಿದೆ. ಭಾರಿ ಮಳೆ ಗಾಳಿಯೊಂದಿಗೆ ಬುಲೆಟ್ ತರಹ ಕಲ್ಲುಗಳು ನೆಲಕ್ಕೆ ಬೀಳುತ್ತಿದ್ದರೆ ಜನ ಕಂಗಾಲಾಗಿದ್ದಾರೆ.
ಆಲಿಕಲ್ಲಿನ ಏಟಿಗೆ ಭಯಗೊಂಡು ಅಲ್ಲಲ್ಲಿ ಆಶ್ರಯಕ್ಕಾಗಿ ದಿಕ್ಕಾಪಾಲಾಗಿದ್ದಾರೆ. ವಾಹನ ಸವಾರರು ತಮ್ಮ ವಾಹನ ಮೇಲೆ ಬೀಳುತ್ತಿರುವ ಆಲಿಕಲ್ಲಿನ ರಭಸದ ಏಟಿಗೆ ಆತಂಕಗೊಂಡು ವಾಹನ ನಿಲ್ಲಿಸಲು ಸೂಕ್ತ ಸ್ಥಳವಕಾಶಕ್ಕಾಗಿ ಪರದಾಡಿದ್ದಾರೆ.
ರಾತ್ರಿ ಸಮಯದಲ್ಲಿ ಒಮ್ಮಿಂದೊಮ್ಮೆಲೇ ಸುರಿಯುತ್ತಿರುವ ಭಯಾನಕ ಮಳೆಯಿಂದ ವಾಹನ ಸಂವಾದಿಗಳು ಸೇರಿದಂತೆ ಮನೆಯಲ್ಲಿದ್ದವರು ಮಳೆ ಆರ್ಭಟಕ್ಕಿಂತ ಆಲಿಕಲ್ಕಿನ ಏಟಿಗೆ ಭಯಭೀತಗೊಂಡಿದ್ದಾರೆ. ಅದೃಷ್ಟವಶಾತ್ ಇಲ್ಲಿವರೆಗೂ ಯಾವುದೆ ದುರ್ಘಟನೆ ಬಗ್ಗೆ ವರದಿಯಾಗಿಲ್ಲ.