ಪ್ರಮುಖ ಸುದ್ದಿ
ಕಾಂಗ್ರೆಸ್ ಮುಖಂಡರಿಂದ ಬಿಜೆಪಿ ಕಾರ್ಯಕರ್ತನಿಗೆ ಥಳಿತ?
ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ವಾಡಿ ಪಟ್ಟಣದಲ್ಲಿ ಪುರಸಭೆ ಸದಸ್ಯ ಶರಣು ನಾಟೇಕಾರ್ ಹಾಗೂ ಗುಂಪು ಬಿಜೆಪಿ ಕಾರ್ಯಕರ್ತ ಶಿವರಾಜ್ ಹೂಗಾರ್ ಮೇಲೆ ಹಲ್ಲೆ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಇಂಗಳಗಿ ಗ್ರಾಮಸ್ಥರ ಜೊತೆ ಖಾಸಗಿ ಸಿಮೆಂಟ್ ಫ್ಯಾಕ್ಟರಿ ವಿರುದ್ಧ ಪ್ರತಿಭಟಿಸಿದ್ದಕ್ಕೆ ಶರಣು ಮತ್ತು ಗುಂಪು ಹಲ್ಲೆ ನಡೆಸಿದೆ ಎಂದು ಶಿವರಾಜ್ ಹೂಗಾರ್ ಆರೋಪಿಸಿದ್ದಾರೆ.
ಗಾಯಾಳು ಶಿವರಾಜ್ ಹೂಗಾರ್ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಖಾಸಗಿ ಸಿಮೆಂಟ್ ಫ್ಯಾಕ್ಟರಿ ಪರವಾಗಿ ಬಂದು ಕಾಂಗ್ರೆಸ್ ಮುಖಂಡರು ಹಲ್ಲೆ ನಡೆಸಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಸಂಘರ್ಷಕ್ಕೆ ಕಾರಣವಾಗಿದೆ.