”ಸ್ವಾಮಿಗಳಲ್ಲೂ ಸಹ ವಿಧಾನಸೌಧ ಮೀರಿಸುವ ರಾಜಕೀಯ ಇದೆ!”
ಚಿತ್ರದುರ್ಗ : ನಾವು ಲಿಂಗಾಯತ ಸಮುದಾಯದಲ್ಲಿನ ಬಡವರು, ಸೌಲಭ್ಯ ವಂಚಿತರ ಬದುಕಿಗಾಗಿ ನಾವು ಹೋರಾಟ ಮಾಡಿದ್ದೇವೆ. ಯಾವುದೇ ರಾಜಕೀಯ ಲಾಭಕ್ಕಾಗಿ ಅಲ್ಲ. ಆದರೆ, ಮಾತೆ ಮಹಾದೇವಿ ಮಾತಿನ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಒಂದು ಸಲ ಕಾಂಗ್ರೆಸ್ ಗೆ ವೋಟ್ ಹಾಕವಂತೆ ಕರೆ ನೀಡಿದರು. ಆಗಲೂ ನಾನು ಅದು ತಪ್ಪು ಎಂದು ಹೇಳಿದ್ದೆನು. ರಂಭಾಪುರಿ ಸ್ವಾಮಿಗಳು ಬಿಜೆಪಿಗೆ ಬೆಂಬಲಿಸಿದಾಗಲೂ ತಪ್ಪು ಎಂದು ಹೇಳಿದ್ದೆ. ಸ್ವಾಮಿಗಳಲ್ಲಿ ನಮ್ಮ ವಿಧಾನಸೌಧಕ್ಕೂ ಹೆಚ್ಚು ರಾಜಕೀಯ ಇದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾರ್ಮಿಕವಾಗಿ ನುಡಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಮಾಧ್ಯಮ ಪ್ರತಿನಿಧಿಳಿಗೆ ಪ್ರತಿಕ್ರಿಯಿಸಿದರು. ಲಿಂಗಾಯತ ಸ್ವತಂತ್ರ ಧರ್ಮ ಆಗಿದ್ದು ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದೆ. ಕೇಂದ್ರ ಸರ್ಕಾರ ತಿರಸ್ಕರಿಸಿದಲ್ಲಿ ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಗುತ್ತದೆ. ಮತ್ತೆ ರಾಜ್ಯ ಸರ್ಕಾರದಿಂದ ಶಿಫಾರಸ್ಸು ಮಾಡುವ ಅಗತ್ಯ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.