ಸಿಲಿಂಡರ್ ಬ್ಲಾಸ್ಟ್ ಓಮಿನಿ, ನ್ಯಾನೋ ಕಾರು, ಹೊಟೇಲ್ ಬೆಂಕಿಗೆ ಆಹುತಿ
ಓಮಿನಿ ವ್ಯಾನ್ನಲ್ಲಿರುವ ಸಿಲಿಂಡರ್ ಬ್ಲಾಸ್ಟ್ ಸುತ್ತಲೂ ವ್ಯಾಪಿಸಿದ ಬೆಂಕಿ
ಯಾದಗಿರಿಃ ಜಿಲ್ಲೆಯ ಗುರುಮಠಕಲ್ ನಗರದ (ತಹಸೀಲ್ ಕಚೇರಿ ಎದುರು) ಹೈದ್ರಾಬಾದ್ ರಸ್ತೆಯಲ್ಲಿರುವ ಗ್ಯಾರೇಜ್ನಲ್ಲಿ ನಿಲ್ಲಿಸಿದ ಓಮಿನಿ ವ್ಯಾನ್ ನಲ್ಲಿರುವ ಸಿಲಿಂಡರ್ ಬ್ಲಾಸ್ಟ್ ಆಗಿದ್ದು, ಗ್ಯಾರೇಜ್ ಸೇರಿದಂತೆ ಸುತ್ತಲಿನ ಪ್ರದೇಶಕ್ಕೆ ಬೆಂಕಿ ಆವರಿಸಿದ್ದು, ಪಕ್ಕದ ಹೊಟೇಲ್ಗೂಬೆಂಕಿ ಹೊತ್ತಿ ಉರಿದ ಪರಿಣಾಮ ಹೊಟೇಲ್ ನಲ್ಲಿರುವ ಸಿಲಿಂಡರ್ ಸಹ ಬ್ಲಾಸ್ಟ್ ಆಗಿದ್ದು ಇನ್ನಷ್ಟು ಬೆಂಕಿ ಸುತ್ತಲೂ ವ್ಯಾಪಸಿದ್ದು ಹೊತ್ತಿ ಉರಿಯುತ್ತಿದೆ.
ಈ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಆದರೆ ಬೆಂಕಿ ಸುತ್ತಲಿನ ಪ್ರದೇಶ ಆವರಿಸುತ್ತಿದ್ದು, ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದ ಹಲವು ಮಾರ್ಗೋಪಾಯ ನಡೆಸುತ್ತಿದ್ದರೂ ಬೆಂಕಿ ಕಡಿಮೆಯಾಗುತ್ತಿಲ್ಲ.
ಈ ಕ್ಷಣದವರೆಗೂ ಯಆವುದೇ ಪ್ರಾಣಪಾಯ ಕಂಡು ಬಂದಿಲ್ಲ. ಸ್ಥಳದಲ್ಲಿ ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಗೆ ನೆರವು ನೀಡುತ್ತಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಕಸರತ್ತು ಮುಂದುವರೆದಿದೆ.





ಮಾರುತಿ೮೦೦ ಮಾರುತಿ ವ್ಯಾನ್ ಹಾಗೂ ವೆಗನ್ ಆರ್ ಸೇರಿದಂತೆ ಹಲವು ವಾಹನಗಳಲ್ಲಿ ಇಂಧನವಾಗಿ ಅಡುಗೆ ಅನಿಲದ ಸಿಲಿಂಡರ್ ಬಳಸುವ ಪದ್ಧತಿ ಜಾರಿಯಲ್ಲಿದ್ದು ಇದು ತುಂಬಾ ಅಪಾಯಕಾರಿ ಎಂದು ಇದರಿಂದ ತಿಳಿದು ಬಂದಿದೆ.
ಸಾಮಾಜಿಕ ಕಾಳಜಿಯಿಂದ ಪ್ರಕಟಿಸಿದ ಈ ಸುದ್ದಿ ಪ್ರಯೋಜನಕಾರಿಯಾಗಿದ್ದು ಸಂಪಾದಕರು ಅಭಿನಂದಾರ್ಹರು.
ಧನ್ಯವಾದಗಳು ಸರ್