ಬಸವಭಕ್ತಿ
ಕಾಲಭೈರವನ ಮೊರೆ ಹೋದ ಸಿಎಂ ಹೆಚ್.ಡಿ.ಕುಮಾರಸ್ವಾಮಿ : ಅಮಾವಾಸ್ಯೆ ಪೂಜೆ!
ಮಂಡ್ಯ: ಅಮಾವಾಸ್ಯೆ ಪ್ರಯುಕ್ತ ಆದಿಚುಂಚನಗಿರಿಯ ಕಾಲಭೈರವ ದೇಗುಲದಲ್ಲಿ ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಈಗಾಗಲೇ ಕಾಲಭೈರವನಿಗೆ ಒಂಬತ್ತು ತಿಂಗಳ ಕಾಲ ಪ್ರತಿ ಅಮವಾಸ್ಯೆ ಪೂಜೆ ಸಲ್ಲಿಸಿರುವ ಹೆಚ್.ಡಿ.ದೇವೇಗೌಡರ ಕುಟುಂಬ ಇಷ್ಟಾರ್ಥ ಈಡೇರಿರುವ ಹಿನ್ನೆಲೆ ಇಂದು ವಿಶೇಷ ಪೂಜೆ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.
ಮೇ.15 ರಂದು ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆದ ದಿನವೂ ಹೆಚ್.ಡಿ.ಕುಮಾರಸ್ವಾಮಿ ಕುಟುಂಬದಿಂದ ಪೂಜೆ ಸಲ್ಲಿಸಲಾಗಿತ್ತು. ಮುಖ್ಯಮಂತ್ರಿ ಆದ ಬಳಿಕ ಇದೇ ಮೊದಲಬಾರಿಗೆ ಹೆಚ್.ಡಿ.ಕೆ ಕ್ಷೇತ್ರ ದರ್ಶನ ಮಾಡುತ್ತಿದ್ದಾರೆ.