ಪ್ರಮುಖ ಸುದ್ದಿ
ವಿಧಾನಸೌಧದಲ್ಲಿ ಭ್ರಷ್ಟಾಚಾರವಿದೆ ಅಂದ್ರು ಸಿಎಂ, ಇದ್ರೆ ತಡೆಯಲಿ ಅಂದ್ರು ಸಿದ್ರಾಮಯ್ಯ
ವಿಧಾನಸೌಧದಲ್ಲಿ ಭ್ರಷ್ಟಾಚಾರವಿದೆ -ಸಿಎಂ ಕುಮಾರಸ್ವಾಮಿ
ಬೆಂಗಳೂರಃ ವಿಧಾನಸೌಧದಲ್ಲಿ ಭ್ರಷ್ಟಾಚಾರವಿದೆ ಎಂದು ಸಿಎಂ ಕುಮಾರಸ್ವಾಮಿ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ರು,
ಸಿಎಂ ಅವರೇ ವಿಧಾನಸೌಧದಲ್ಲಿ ಭ್ರಷ್ಟಾಚಾರವಿದೆ ಎಂದಿದ್ದಾರಲ್ಲ ಎಂದು ಮಾಧ್ಯಮದವರು ಮಾಜಿ ಸಿಎಂ ಸಿದ್ರಾಮಯ್ಯ ನವರನ್ನು ಕೇಳಿದರೆ, ಇದ್ರೆ ತಡೆಯಲಿ ಬಿಡಿ, ಅವರು ಭ್ರಷ್ಟಾಚಾರ ನೋಡಿದ್ರೆ ತಡೆಯಲಿ ಅವರ ಕೆಲಸ ಅದು ಎಂದರು.
ಇದೇ ವಿಷಯದ ಬಗ್ಗೆ ಸಚಿವ ಕೃಷ್ಣೆಭೈರೆಗೌಡರು ಮಾಧ್ಯಮದೊಂದಿಗೆ ಮಾತನಾಡಿ, ಭ್ರಷ್ಟಾಚಾರ ಎಲ್ಲಡೆ ವ್ಯಾಪಿಸಿದೆ. ಮೇಲಿಂದ ಹಿಡಿದು ಬುಡದವರೆಗೆ ಇದೆ. ಇಲ್ಲಿ ಯಾರೊಬ್ಬರು ಅಪರಂಜಿ ಅಲ್ಲ, 24 ಕ್ಯಾರೇಡ್ ಅನ್ಕೊಂಡ್ರೆ ಆತ್ಮವಂಚನೆ ಮಾಡಿಕೊಂಡಂತೆ ಎಂದರು.
ಮೂವರ ನಾಯಕರ ಮಾತಿನ ಅರ್ಥ ನೋಡಿ ಜನ ಭ್ರಷ್ಟಾಚಾರವೇ ಸರ್ಕಾರವನ್ನು ಆಳುತ್ತಿದೆ ಎಂದು ಇನ್ನೂ ಕಿತ್ತೆಸೆಯುವುದು ಅಷ್ಟು ಸುಲಭವಲ್ಲ ಎಂದು ಮಾತನಾಡಿಕೊಳ್ಳುವಂತಾಗಿದೆ.