ಪ್ರಮುಖ ಸುದ್ದಿ

ನಗರಾಭಿವೃದ್ಧಿಗೆ ಪರಸ್ಪರರ ಸಹಕಾರ ಅಗತ್ಯಃ ದರ್ಶನಾಪುರ

ಶಹಾಪುರ ಕಿರಾಣಿ ವರ್ತಕರ ಸಂಘದಿಂದ ಸನ್ಮಾನ

ಯಾದಗಿರಿಃ ನಗರದಲ್ಲಿ ಮೂಲಭೂತ ಸೌಕರ್ಯಗಳಿಗೆ ತೀರಾ ಕೊರತೆ ಉಂಟಾಗಿದ್ದು. ಮುಂಬರುವ ದಿನಗಳಲ್ಲಿ ವಿವಿಧ ಯೋಜನೆಯ ಅನುದಾನಗಳಲ್ಲಿ ಮಾದರಿಯ ನಗರವನ್ನಾಗಿಸುವ ಪ್ರಯತ್ನವಿದ್ದು ವರ್ತಕರು ಹಿರಿಯ ದುರೀಣರ ಪರಸ್ಪರ ಸಹಕಾರ ಅತ್ಯಗತ್ಯವಿದೆ ಎಂದು ಮಾಜಿ ಸಚಿವ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ತಿಳಿಸಿದರು.

ಜಿಲ್ಲೆಯ ಶಹಾಪುರ ತಾಲೂಕಿನ ದಿಗ್ಗಿ ಗ್ರಾಮದ ಶ್ರೀ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ನಗರ ಕೀರಾಣಿ ವರ್ತಕರ ಸಂಘ ಆಯೋಜಿಸಿದ್ದ ನೂತನ ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ನಗರಸಭೆಯಲ್ಲಿ ಜನ ಸಾಮಾನ್ಯರಿಗೆ ತಮ್ಮ ಆಸ್ತಿ ಇತರೆ, ದಾಖಲಾತಿಗಳನ್ನು ಸುಲಭವಾಗಿ ದೊರೆಯುವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಹಂತ ಹಂತವಾಗಿ ಈಡೇರಿಸಿ ಮತ ಬಾಂಧವರಿಂದ ಋಣ ಮುಕ್ತ ಪಡೆಯುತ್ತೇನೆ ಎಂದು ದರ್ಶನಾಪುರವರು ಮಾರ್ಮಿಕವಾಗಿ ತಿಳಿಸಿದರು.

ನಗರದಲ್ಲಿ ದಿನ ಬೆಳಗಾದಂತೆ ಜನ ಸಾಂದ್ರತೆ ಹೆಚ್ಚುತ್ತಿದ್ದು, ನಗರದಲ್ಲಿ ಗುಡಿಸಲು ಮುಕ್ತ ನಗರವನ್ನಾಗಿಸಲಾಗುತ್ತಿದೆ, ಒಂದು ಸಾವಿರಕ್ಕೂ ಹೆಚ್ಚು ನಿವೇಶನ ಸಹಿತ ಮನೆಗಳನ್ನು ನಿರ್ಮಣ ಮಾಡಿದಲ್ಲಿ ವಾಸಿಸಲು ಅನೂಕೂಲಕರವಾಗಲು ಸಾಧ್ಯವಾದೀತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಿರಾಣಿ ವರ್ತಕರ ಸಮಸ್ಯಗಳನ್ನು ಕುರಿತು ಸಮಗ್ರವಾಗಿ ಚರ್ಚಿಸಿ ಮುಂದಿನ ದಿನಮಾನಗಳಲ್ಲಿ ವರ್ತಕರಿಗೆ ಅನೂಕೂಲಕರವಾಗುವ ಸ್ಥಿತಿಯಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.

ಮುಖಂಡ ಸಿದ್ದಲಿಂಗಣ್ಣ ಆನೇಗುಂದಿ ಮಾತನಾಡಿ, ಜಿಎಸ್‍ಟಿ ಹೇರಿಕೆಯಿಂದ ಸಣ್ಣ ವ್ಯಾಪಾರಸ್ಥರು ಪರಿತಪಿಸುವಂತಾಗಿದೆ. ಕಿರಾಣಿ ಸಮುಚ್ಚಾಯ ನಿರ್ಮಾಣ ಮಾಡಿ ಕಿರಾಣಿ ವರ್ತಕರಿಗೆ ಅನೂಕೂಲತೆ ಮಾಡವ ಕಾರ್ಯ ನಡೆಯಬೇಕಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ ಮಾತನಾಡಿದರು. ಗುಮಾಸ್ತ ಸಂಘದ ಅಧ್ಯಕ್ಷ ಪ್ರಕಾಶ ಸ್ವಾಮೀ ಮುಡಬೂಳ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಪ್ತರ ಸಲ್ಲಿಸಿದರು.
ಅಲ್ಲದೆ ಕಿರಾಣಿ ವರ್ತಕರ ಸಂಘದಿಂದ ನಾನಾ ಬೇಡಿಕೆಗಳು ಕುರಿತು ಮನವಿ ಪತ್ರವನ್ನು ಮುಖಂಡರಾದ ಗುಂಡಪ್ಪ ತುಂಬಗಿ ಸಲ್ಲಿಸಿದರು. ಕೃಷ್ಣ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ ಹೀರೆಮಠರವರು ವೇದಿಕೆಯಲ್ಲಿ ಉಪ ಸ್ಥಿತಿರಿದ್ದರು.

ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಲಿಂ ಸಂಗ್ರಾಮ, ಶಿವಶರಣಪ್ಪ ಕಲಬುರ್ಗಿ, ಬಸವರಾಜ ಹೇರುಂಡಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು.

ವರ್ತಕರ ಸಂಘದ ಅಶೋಕ ಮೋಗಾ, ಸಿದ್ದು ಎಂಬೆರಾಳ, ವಿರೇಶ ಆನೇಗುಂದಿ, ನಟರಾಜ ಗಟ್ಟಿನ, ಹಾಜಿ ಹಯ್ಯಳಶಾಂತು ತೊಟಗೇರ, ಮಲ್ಲಿಕಾರ್ಜುನ ಜವಳಿ, ಮಲ್ಲಯ್ಯ ದೊತ್ರೆ., ನಾಗರಾಜ ತುಂಬಗಿ, ಕಾಂತಿ ಲಾಲ ಜೈನ, ಗುರು ರಾಜ ತುಂಬಗಿ, ರಾಜು ರತ್ನಾಕರ ಶೆಟ್ಟಿ ಸೇರಿದಂತೆ ನೂರಾರು ಜನ ವರ್ತಕರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button