ಮಾಜಿ ಸಿಎಂ ಸಿದ್ಧರಾಮಯ್ಯಗೆ ಮೂಗುದಾರ ಹಾಕಿತಾ ಹೈಕಮಾಂಡ್ !
ಬೆಂಗಳೂರು : ಧರ್ಮಸ್ಥಳ ಬಳಿಯ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಕೆಲವರೊಂದಿಗೆ ಸಹಜವಾಗಿ ಮಾತನಾಡಿದ್ದೇನೆ. ಅದನ್ನೇ ವಿಡಿಯೋ ಮಾಡಿಕೊಂಡು ನನ್ನ ನಿರ್ಧಾರ ಎಂಬಂತೆ ಬಿಂಬಿಸಿದ್ದು ಎಷ್ಟು ಸರಿ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಆ ಮೂಲಕ ಸಿದ್ಧರಾಮಯ್ಯ ಸಮ್ಮಿಶ್ರ ಸರ್ಕಾರದಿಂದ ಕಡೆಗಣಿಸಲ್ಪಟ್ಟಿದ್ದಾರೆ. ಪರಿಣಾಮ ಸಮ್ಮಿಶ್ರ ಸರ್ಕಾರವನ್ನು ಸಿದ್ಧರಾಮಯ್ಯ ಬಣವೇ ಅಸ್ಥಿರಗೊಳಿಸಲಿದೆ ಎಂಬ ಊಹಾಪೋಹಗಳಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ತೆರೆ ಎಳೆದಿದ್ದಾರೆ.
ಸಮ್ಮಿಶ್ರ ಸರ್ಕಾರ ನಾವು ಮಂಡಿಸಿದ ಬಜೆಟ್ ಅನ್ನೇ ಮುಂದುವರೆಸಬೇಕು, ಹೊಸ ಬಜೆಟ್ ಮಂಡಿಸುವ ಅಗತ್ಯವಿಲ್ಲ. ಲೋಕಸಭೆ ಚುನಾವಣೆವರೆಗೆ ಸಮ್ಮಿಶ್ರ ಸರ್ಕಾರ ಇರಬಹುದು. ಚುನಾವಣೆ ಬಳಿಕೆ ಏನೆಲ್ಲಾ ಬೆಳವಣಿಗೆಗಳು ಆಗುತ್ತವೆ ನೋಡಬೇಕು ಎಂದೆಲ್ಲಾ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು ಬಿಸಿಬಿಸಿ ಚರ್ಚೆಗೆ ಕಾರಣವಾಗಿತ್ತು.
ಕಾಂಗ್ರೆಸ್ ಹೈಕಮಾಂಡ್ ಮಾಜಿ ಸಿಎಂ ಶಾಂತಿವನದಿಂದ ಬೆಂಗಳೂರು ತಲುಪುವ ಮುನ್ನವೇ ಸಿದ್ಧರಾಮಯ್ಯ ಬಾಯಿಗೆ ಬೀಗ ಹಾಕುವಂತೆ ಮಾಡಿದೆಯೇ. ಪರಿಣಾಮ ಸಿದ್ಧರಾಮಯ್ಯ ಈಗ ತಾವೇ ಮಾತನಾಡಿದ ಮಾತುಗಳಿಂದ ನುಣುಚಿಕೊಳ್ಳುವ ಯತ್ನ ಮಾಡಿದ್ದಾರೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.




