ಪ್ರಮುಖ ಸುದ್ದಿ

ಆರೋಗ್ಯಕರ ಬದುಕಿಗೆ ಉತ್ತಮ ಪರಿಸರ ಅಗತ್ಯ-ಫೆಡ್ರಿಕ್ ಡಿಸೋಜಾ

ವನಮಹೋತ್ಸವ ಆಚರಣೆ

ಸೇಂಟ್ ಪೀಟರ್ ಶಾಲೆಯಲ್ಲಿ ವನಮಹೋತ್ಸವ

ಯಾದಗಿರಿ,ಶಹಾಪುರಃ ಮಕ್ಕಳು ತಮ್ಮ ತಮ್ಮ ಜನ್ಮ ದಿನ ಅಥವಾ ಶುಭಾ ಸಮಾರಂಭಗಳಲ್ಲಿ ಸಸಿ ನೆಡುವ ಮೂಲಕ ಆಚರಿಸಿಕೊಳ್ಳಬೇಕು. ಪ್ರಸ್ತುತ ಅರಣ್ಯ ನಾಶದಿಂದ ಜಾಗತಿಕ ತಾಪಮಾನ ಜಾಸ್ತಿಯಾಗಿ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಕಾರಣ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಪ್ರತಿಯೊಬ್ಬರು ಗಿಡ ಮರಗಳನ್ನು ಬೆಳೆಸುವ ಸಂಕಲ್ಪ ತೊಡಬೇಕು ಎಂದು ಫಾದರ್ ಫೆಡ್ರಿಕ್ ಡಿಸೋಜಾ ಹೇಳಿದರು.

ನಗರದ ಸೇಂಟ್ ಪೀಟರ್ ಶಾಲೆಯಲ್ಲಿ ಆಯೋಜಿಸಿದ್ದ ವನಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ಅಂದರೆ ನಮ್ಮ ಸುತ್ತಮುತ್ತಲಿನ ಪ್ರದೇಶ ನಮ್ಮನ್ನು ಸುತ್ತುವರೆದಂಥದ್ದು ಅಥವಾ ಆವರಿಸಿದಂಥದ್ದು ಎಂದಾಗುತ್ತದೆ. ನಾವು ವಾಸಿಸುವ ಸುತ್ತಲೂ ಸ್ವಚ್ಛತೆ ಮತ್ತು ಹಸಿರು ಬೆಳೆಸಿಕೊಂಡಿದ್ದಲ್ಲಿ ಉತ್ತಮ ವಾತವಾರಣ ಕಂಡುಕೊಳ್ಳಬಹುದು.

ಉತ್ತಮ ವಾತವಾರಣದಿಂದ ಮನುಷ್ಯನ ಆರೋಗ್ಯಕರ ಬೆಳವಣಿಗೆ ಸಾಧ್ಯ. ಪರಿಸರ ಮನುಷ್ಯನ ಸರ್ವೋತ್ತಮ ಬೆಳವಣಿಗೆಗೆ ಸಹಕಾರಿಯಾಗಲಿದೆ. ಕಾರಣ ಗಿಡ ಮರ ಮಣ್ಣು ಮತ್ತು ನೀರು ಸೇರಿದಂತೆ ವೈವಿಧ್ಯಮಯ ಸೊಬಗನ್ನು ನಾವೆಲ್ಲ ರಕ್ಷಿಸಿಕೊಳ್ಳಬೇಕಿದೆ. ನಾವೆಲ್ಲ ಪ್ರಕೃತಿಯ ಕೂಸು. ಹರಿಯುವ ನದಿಗೆ ಅಡ್ಡವಾಗಿ ಏನಾದರೂ ಬಂದರೆ ಅದು ತನ್ನ ಹರಿಯವು ಮಾರ್ಗವನ್ನು ಬದಲಿಸಿಕೊಳ್ಳುತ್ತದೆ.

ಅದರಂತೆ ನಾವು ಪರಿಸರ ರಕ್ಷಣೆಯಲ್ಲಿ ತೊಡಗಿಸಿಕೊಂಡಾಗ ಬರುವ ಅಡಡಿ ಆತಂಕವನ್ನು ಬದಿಗೊತ್ತಿ ಅದರ ರಕ್ಷಣೆಗೆ ನಮಗೆ ಬೇಕಾದ ಸಮಯ ಆಯ್ದುಕೊಂಡು ಸೇವೆ ಸಲ್ಲಿಸಬೇಕು. ನಾವು ಅದನ್ನು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ ಎಂಬ ಅರಿವು ಮೂಡಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆ ಕುರಿತು ರೂಪಕ ಪ್ರದರ್ಶನ ಜರುಗಿತು. ಮತ್ತು ಶಾಲಾ ವಿದ್ಯಾರ್ಥಿಗಳಲ್ಲಿ ವಿವಿಧ ಸಾಂಸ್ಕøತಿಕ, ಶಿಕ್ಷಣ ಮತ್ತು ಕ್ರೀಡಾ ಸೇರಿದಂತೆ ಇತರೆ ವಿಭಾಗದ ನಾಯಕರನ್ನಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ಪತ್ರಕರ್ತ ಮಲ್ಲಿಕಾರ್ಜುನ ಮುದನೂರ, ಶಾಲಾ ಮುಖ್ಯೋಪಾಧ್ಯಯಿನಿ ಸಿಸ್ಟರ್ ರೀನಾಡಿಸೋಜಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಿಸ್ಟರ್ ಅನಿಶಾ ಸ್ವಾಗತಿಸಿದರು. ಶಿಕ್ಷಕಿ ಸರೋಜಾ ನಿರೂಪಿಸಿದರು. ಶಿಕ್ಷಕಿ ರೇಣುಕಾ ನಾಯಕ ವಂದಿಸಿದರು. ನಂತರ ಶಾಲಾ ಆವರಣದಲ್ಲಿ ಹಲವು ಸಸಿಗಳನ್ನು ನೆಡಲಾಯಿತು.

Related Articles

Leave a Reply

Your email address will not be published. Required fields are marked *

Back to top button