ಪ್ರಮುಖ ಸುದ್ದಿ
ಮೋದಿ ರೈತನ ಮಗನಲ್ಲ- ಖರ್ಗೆ ಹೇಳಿಕೆ
ಯಾದಗಿರಿಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಾಲ್ಕು ವರ್ಷ ಮುಗಿದ ನಂತರ ರೈತರ ನೆನಪಾಗಿದೆ, ಸಾಲ ಮನ್ನಾ ವಿಷಯದ ಬಗ್ಗೆ ಚಕಾರವೆತ್ತದ ಕೇಂದ್ರ ಸರ್ಕಾರ ಈಗ ರೈತರ ಬಗ್ಗೆ ಅಪಾರ ಕಾಳಜಿ ತೋರುತ್ತಿದೆ ಎಂದು ಸಂಸದೀಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಯಾದಗಿರಿಯ ಬಸವೇಶ್ವರ ಗಂಜ್ ನಲ್ಲಿ ಇಂದಿರಾ ಕ್ಯಾಂಟೀನ್ ಗೆ ಚಾಲನೆ ನೀಡಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಿ ರೈತರ ಕಾಳಜಿ ವಹಿಸಬೇಕಿತ್ತು. ಪ್ರಸ್ತುತ ಲೋಕಸಭೆ ಚುನಾವಣೆ ನಿಮಿತ್ತ
ರೈತರ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ಕಾಳಜೀ ತೋರುತ್ತಿರುವುದು ಚುನಾವಣೆ ಗಿಮಿಕ್ ಎಂದು ಆರೋಪಿಸಿದರು.
ಮೋದಿಜೀ ದೇಶದಲ್ಲಿ ಎಷ್ಟೇ ಅಲಿ ಹೊಂದಿದ್ದರು ಈ ಬಾರಿ ಚುನಾವಣೆ ಫಲ ನೀಡಲ್ಲ ಎಂದು ಕುಟುಕಿದರು.
ಪ್ರಧಾನಿ ಮೋದಿ ಕಾಪಾಡಿದ್ದು ಕಾರ್ಪೊರೇಟ್ ವಲಯದ ಹಿತ. ಹೀಗಾಗಿ ಮೋದಿ ರೈತನ ಮಗನಲ್ಲ,ಕಾರ್ಪೊರೇಟ್ ಮಗ ಎಂದರು.