ಪ್ರಮುಖ ಸುದ್ದಿ
ನಾನೊಬ್ಬನೇ ಈ ಭಾಗದ ಲಿಂಗಾಯತ ಶಾಸಕ ಅಂದಿದ್ಯಾರು.? ಯಾಕೆ.?
ಕೊಟ್ರೆ ಸಚಿವ ಸ್ಥಾನ ಕೊಡಿಃ ಬಿಸಿ ಪಾಟೀಲ್
ಬೆಂಗಳೂರಃ ನನಗ್ಯಾವ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಕಿಲ್ಲ. ಕೊಟ್ರೆ ಸಚಿವ ಸ್ಥಾನ ಕೊಡಿ ನಾನು ಸಚಿವ ಸ್ಥಾನ ಆಕಾಂಕ್ಷಿ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಬಿ.ಸಿ.ಪಾಟೀಲ್ ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಗದಗ, ಧಾರವಾಡ, ಹಾವೇರಿ ಭಾಗದಲ್ಲಿ ನಾನೊಬ್ಬನೇ ವೀರಶೈವ ಲಿಂಗಾಯತ ಶಾಸಕನಾಗಿದ್ದು, ಅದರಲ್ಲೂ ಲಿಂಗಾಯತ ಸಾದರ ಸಮಾಜದಿಂದ ಬಂದ ನನಗೆ ಈ ಬಾರಿ ಅವಕಾಶ ಕಲ್ಪಿಸಿದರೆ ಸಾಮಾಜಿಕ ನ್ಯಾಯವು ನಮ್ಮ ಸಮಾಜಕ್ಕೆ ನೀಡಿದಂತಾಗುತ್ತದೆ.
ಸಚಿವ ಸ್ಥಾನ ಕೊಡದಿದ್ದರೂ ನಾನೇನು ಪಕ್ಷ ತೊರೆಯುವ ಮಾತಾಗಲಿ ಅಥವಾ ಪಕ್ಷದ ವಿರುದ್ಧ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.