ಪ್ರಮುಖ ಸುದ್ದಿ
ಯೋಗ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ : ಪೊಲೀಸರ ದಾಳಿಯಿಂದ ಬಯಲು
ಮೈಸೂರು : ನಗರದ ರಮಾವಿಲಾಸ ರಸ್ತೆಯ ಮನೆಯೊಂದರಲ್ಲಿ ಯೋಗಾ ಸೆಂಟರ್ ಹೆಸರಿನಲ್ಲಿ ಬಾಂಗ್ಲಾ ಮೂಲದ ಯುವತಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದೇವರಾಜ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ. ಏಳು ಜನ ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ಹೀಗಾಗಿ, ಹೊರಗೆ ಯೋಗಾ ಸೆಂಟರ್ ಎಂದು ನಾಮಫಲಕ ಹಾಕಿಕೊಂಡು ಒಳಗೆ ವೇಶ್ಯಾವಾಟಿಕೆ ನಡೆಸುತ್ತಿರುವ ಸುದ್ದಿ ತಿಳಿದು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.