ಜನಮನ
ಮಾಜಿ ಸ್ಪೀಕರ್ ಕೋಳಿವಾಡ್ ಗೆ ಪತ್ರಕರ್ತ ಪದ್ಮರಾಜ್ ದಂಡಾವತಿ ಟಾಂಗ್ !
ವಿಜಯಪುರ : ಮಾಧ್ಯಮಗಳು ಇಲ್ಲವಾಗಿದ್ದರೆ ಸೋಫಾ ಅವರ ಮನೆಯಲ್ಲೇ ಇರುತ್ತಿತ್ತು. ಮಾದ್ಯಮಗಳು ತನ್ನ ಕರ್ತವ್ಯ ನಿಭಾಯಿಸಿ ಪ್ರಕರಣ ಬಯಲಿಗೆಳೆದ ಬಳಿಕವಷ್ಟೇ ಸೋಫಾ ಹಿಂದಿರುಗಿಸುವೆ. ಅಥವಾ ಸೋಫಾ ಮೌಲ್ಯದ ಹಣ ನೀಡುವೆ ಎಂದು ಹೇಳಿದ್ದಾರೆ. ಅವರಿಗೆ ನಾಚಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದು ಹೇಳುವ ಮೂಲಕ ಮಾಜಿ ಸ್ಪೀಕರ್ ಕೋಳಿವಾಡ್ ಗೆ ಹಿರಿಯ ಪತ್ರಕರ್ತ ಪದ್ಮರಾಜ್ ದಂಡಾವತಿ ಟಾಂಗ್ ನೀಡಿದ್ದಾರೆ.
ನಗರದ ಬಿಎಲ್ ಡಿಈ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ವರ್ತಮಾನ ಬಿಕ್ಕಟ್ಟು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪದ್ಮರಾಜ್ ದಂಡಾವತಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ದಂಡಾವತಿ ಅವರು ಸಮಕಾಲೀನ ರಾಜಕೀಯ ನಾಟಕೀಯ ಬೆಳವಣಿಗೆಗಳ ಬೆಳಕು ಚೆಲ್ಲುತ್ತ ಕೋಳಿವಾಡ್ ವಿಷಯ ಪ್ರಸ್ತಾಪಿಸಿ ಪರೋಕ್ಷವಾಗಿ ಟಾಂಗ್ ನೀಡಿದರು.