ಪ್ರಮುಖ ಸುದ್ದಿ
ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ 25 ಜನರ ಬಂಧನ
ಜೂಜು ಅಡ್ಡೆ ಮೇಲೆ ದಾಳಿಃ 25 ಜನರ ಬಂಧನ
ಯಾದಗಿರಿಃ ಜೂಜು ಅಡ್ಡೆ ಮೇಲೆ ದಿಡೀರನೆ ದಾಳಿ ನಡೆಸಿದ ಪೊಲೀಸರು 25 ಜನರ ಬಂಧಿಸಿ, ಅಂದಾಜು 2 ಲಕ್ಷಕ್ಕೂ ರೂಪಾಯಿಗೂ ಹೆಚ್ಚು ಹಣ ಸೇರಿದಂತೆ 52 ಇಸ್ಪೇಟ್ ಎಲೆಗಳನ್ನು ವಶ ಪಡಿಸಿಕೊಂಡ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ರುಕ್ಕುಂಪೇಟೆಯಲ್ಲಿ ನಡೆದಿದೆ.
ಖಚಿತ ಮಾಹಿತಿ ಪಡೆದ ಡಿವೈಎಸ್ಪಿ ಪಾಂಡುರಂಗ ನೇತೃತ್ವದಲ್ಲಿ ದಾಳಿ ನಡೆದಿದ್ದು, ಶಹಾಪುರ ಗ್ರಾಮೀಣ ಪಿಐ ಮಹ್ಮದ್ ಸಿರಾಜ್, ನಗರ ಠಾಣೆಯ ನಾಗರಾಜ ಜಿ, ಮತ್ತು ಬಿ,ಗುಡಿ ಪಿಎಸ್ಐ ತಿಪ್ಪಣ್ಣ ರಾಠೋಡ ಸೇರಿದಂತೆ ಪಿಸಿಗಳಾದ ಮಲ್ಲಿಕಾರ್ಜುನ ಮಡಿವಾಳ, ಬಾಬು ನಾಯಕ, ಗಣೇಶ ದೇವು ಇತರರು ದಾಳಿಯಲ್ಲಿ ಭಾವಹಿಸಿದ್ದು, ಜೂಜುಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುರಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.