ಮುಖ್ಯಮಂತ್ರಿ ಹುದ್ದೆ ಸಾಕಾಗಿ ಹೋಗಿದೆ ಅಂತಿದಾರಂತೆ ಹೆಚ್.ಡಿ.ಕೆ!?
ಕಾಂಗ್ರೆಸ್ ನಾಯಕರ ಕಾಟದಿಂದ ಮುಖ್ಯಮಂತ್ರಿ ಹುದ್ದೆ ನಿಭಾಯಿಸುವುದು ಕಷ್ಟವಾಗಿದೆ. ತಂತಿ ಮೇಲಿನ ನಡಿಗೆಯಂತೆ ಭಾಸವಾಗುತ್ತಿದೆ. ಈ ರಾಜಕೀಯ ಕ್ಷೇತ್ರದಿಂದಲೆ ದೂರ ಹೋಗುವುದು ಉತ್ತಮ ಎಂದು ಖುದ್ದಾಗಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರೇ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಜುಲೈ 21ರಂದು ಬೆಂಗಳೂರಿನ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನು ಎಲ್ಲವನ್ನು ನುಂಗಿ ವಿಷಕಂಠನಂತಿದ್ದೇನೆ ಎಂದಿದ್ದರು. ಅದೇ ಸಂದರ್ಭದಲ್ಲಿ ತಮ್ಮ ಆಪ್ತರ ಬಳಿ ಮಾತನಾಡಿದ್ದ ಸಿಎಂ ಸಿಎಂ ಹುದ್ದೆ ಸಾಕಾಗಿ ಹೋಗಿದೆ ಎಂದು ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಿಎಂ ಅಂತರಂಗದ ಮಾತುಗಳು ಅವರ ಆಪ್ತರ ಮೂಲಕವೇ ಹೊರಬಿದ್ದಿದ್ದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಸಮ್ಮಿಶ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಹೆಚ್.ಡಿ.ಕೆ ಕ್ಷಣಕ್ಷಣಕ್ಕೂ ಕಾಂಗ್ರೆಸ್ ನಾಯಕರ ಸೂಚನೆಗೆ ಕಾಯಬೇಕಿದೆ. ಪರಿಣಾಮ ಹೆಚ್.ಡಿ.ಕೆ ಉತ್ಸವ ಮೂರ್ತಿಯಂತೆ ಕಾರ್ಯನಿರ್ವಹಿಸುವ ಅನಿವಾರ್ಯತೆ ನಿರ್ಮಾಣ ಆಗಿದೆ ಎನ್ನಲಾಗಿದೆ. ಈ ಬಗ್ಗೆ ಸಿಎಂ ಹೆಚ್.ಡಿ.ಕೆ ಯಾವ ಪ್ರತಿಕ್ರಿಯೆ ನೀಡಲಿದ್ದಾರೆ ಕಾದುನೋಡಬೇಕಿದೆ.