ಬಾಲಕರ ಕೈಚಳಕ : ಬ್ಯಾಂಕಿನಲ್ಲಿ 3ಲಕ್ಷ ರೂ. ಕದ್ದ ಬಾಲಕರ ಗುರು ಯಾರು?
ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಯರಬಳ್ಳಿ ಗ್ರಾಮದ ಕೃಷ್ಣ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ಗುತ್ತಿಗೆದಾರ ಮಂಜುನಾಥ್ ಎಂಬುವರ ಹಣ ಕದ್ದು ಬಾಲಕರಿಬ್ಬರು ಸಿಕ್ಕಿಬಿದ್ದ ಘಟನೆ ನಡೆದಿದೆ. ಹಣ ಡ್ರಾ ಮಾಡಲು ಬಂದಿದ್ದ ಮಂಜುನಾಥ್ ಸುತ್ತ ಓಡಾಡಿದ ಬಾಲಕರು ಬ್ಯಾಗ್ ಮರೆಮಾಡಿ ಮಂಜುನಾಥ್ ಡ್ರಾ ಮಾಡಿ ಟೇಬಲ್ ಮೇಲಿಟ್ಟ ಹಣವನ್ನು ಕದ್ದಿದ್ದಾರೆ. ಆದರೆ, ಹಣ ಕದ್ದು ಬ್ಯಾಂಕಿನಿಂದ ಎಸ್ಕೇಪ್ ಆಗುವಷ್ಟರಲ್ಲೇ ಮಂಜುನಾಥ ಎಚ್ಚೆತ್ತುಕೊಂಡಿದ್ದು ಬಾಲಕರನ್ನು ಹಿಂಬಾಲಿಸಿ ಹಿಡಿದಿದ್ದಾರೆ.
ಹಣಕದ್ದು ಕದ್ದು ಪರಾರಿಯಾಗುತ್ತಿದ್ದ ಬಳ್ಳಾರಿ ಮೂಲದ ಬಾಲಕರಿಗೆ ಬುದ್ಧಿವಾದ ಹೇಳಿ ಹಣ ಹಿಂಪಡೆದು ಕಳಿಸಿದ್ದಾರೆ. ಬಾಲಕರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಐಮಂಗಲ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಆದರೆ, ಈವರೆಗೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದ್ರೆ, ಬಾಲಕರಿಗೆ ಕಳ್ಳತನಕ್ಕೆ ಟ್ರೇನ್ ಮಾಡಿ ಕಳುಹಿಸಿದವರು ಯಾರು ಎಂಬುದರ ಬಗ್ಗೆ ಪೊಲೀಸರು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕಿದೆ. ಆ ಮೂಲಕ ಕಳ್ಳತನಕ್ಕೆ ಬ್ರೇಕ್ ಹಾಕುವುದರ ಜೊತೆಗೆ ಪುಟ್ಟ ಬಾಲಕರಿಗೆ ದಿಕ್ಕು ತಪ್ಪಿಸುತ್ತಿರುವವರಿಗೂ ತಕ್ಕ ಪಾಠ ಕಲಿಸಬೇಕಿದೆ.