ಪ್ರಮುಖ ಸುದ್ದಿ
ಏಳು ವರ್ಷದ ಗಂಡು ಚಿರತೆ ಕೊನೆಯುಸಿರು!
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪಾಲವ್ವನಹಳ್ಳಿ ಬಳಿ ಸೆರೆ ಸಿಕ್ಕಿದ್ದ ಚಿರತೆ ಚಿಕಿತ್ಸೆ ಫಲಿಸದೆ ಸಾವನಪ್ಪಿದ ಘಟನೆ ನಡೆದಿದೆ. ಜುಲೈ 25 ರಂದು ಪಾಲವ್ವನಹಳ್ಳಿ ಬಳಿಯ ಅರಣ್ಯದಲ್ಲಿ ಬೇರೊಂದು ಪ್ರಾಣಿ ಜೊತೆ ಕಾದಾಡಿದ್ದ ಚಿರತೆ ಪ್ರಗ್ನಾಹೀನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಅರಣ್ಯ ಅಧಿಕಾರಿಗಳು ಬಲೆ ಮೂಲಕ ಚಿರತೆಯನ್ನು ಹಿಡಿದು ಚಿತ್ರದುರ್ಗ ನಗರದ ಆಡುಮಲ್ಲೇಶ್ವರ ಕಿರು ಪ್ರಾಣಿ ಸಂಗ್ರಹಾಲಯಕ್ಕೆ ಶಿಫ್ಟ್ ಮಾಡಿದ್ದರು. ಆದರೆ, ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ 7 ವರ್ಷದ ಗಂಡು ಚಿರತೆ ಇಂದು ಸಾವನ್ನಪ್ಪಿದೆ.