ಪ್ರಮುಖ ಸುದ್ದಿ
ಟಂ ಟಂ ಆಟೋ ಪಲ್ಟಿ : 14 ಜನ ಕಾರ್ಮಿಕರಿಗೆ ಗಾಯ
ಯಾದಗಿರಿ : ಜಿಲ್ಲೆಯ ಹುಣಸಗಿ ಪಟ್ಟಣ ಸಮೀಪ ಕಾರ್ಮಿಕರು ಪ್ರಯಾಣಿಸುತ್ತಿದ್ದ ಟಂ ಟಂ ಆಟೋ ಪಲ್ಟಿಯಾಗಿದೆ. ಪರಿಣಾಮ ಆಟೋದಲ್ಲಿದ್ದ 14 ಜನ ಗಾಯಗೊಂಡಿದ್ದು ಆ ಪೈಕಿ ಇಬ್ಬರು ಕಾರ್ಮಿಕರು ಗಂಭಿರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹುಣಸಗಿ ಆಸ್ಪತ್ರೆ ಹಾಗೂ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸೊನ್ನಾಪುರ ಗ್ರಾಮದಿಂದ ಕಾರ್ಮಿಕರು ಹುಣಸಗಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ ಎನ್ನಲಾಗಿದೆ. ಹುಣಸಗಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.