ಆಷಾಢದ ಬಳಿಕ ಮಂತ್ರಿ ಆಗುವ ಕನಸು ಕಂಡಿದ್ದ ಕಾಂಗ್ರೆಸ್ಸಿಗರಿಗೆ ಮತ್ತೊಂದು ಶಾಕ್!?
ಬೆಂಗಳೂರು: ಆಷಾಢ ಮುಗಿದ ಬಳಿಕ ಮಂತ್ರಿಯಾಗುವ ಕನಸು ಕಾಣುತ್ತಿದ್ದ ಶಾಸಕರಿಗೆ ಮತ್ತೊಂದು ಶಾಕ್ ಕಾದಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ ಆಗಿದ್ದು ಚುನಾವಣೆ ಮುಗಿದ ಬಳಿಕವೇ ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಜೆಡಿಎಸ್ ದಳಪತಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕುವ ಪ್ಲಾನ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಸಚಿವರಾಗುವ ಆಸೆಯೊಂದಿಗೆ ಕೋಟು ಒಲಿಸಿಕೊಂಡಿದ್ದ ಕಾಂಗ್ರೆಸ್ ನ ಕೆಲ ಶಾಸಕರು ನಿರಾಸೆಗೊಂಡಿದ್ದಾರೆ.
ಬರುವ ವಾರದಲ್ಲಿ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬೆಂಗಳೂರಿಗೆ ಬರಲಿದ್ದ ಮಂತ್ರಿ ಸ್ಥಾನ ವಂಚಿತರು ಈ ಬಗ್ಗೆ ಚರ್ಚಿಸಲಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ದೋಸ್ತಿ ಸರ್ಕಾರದಲ್ಲಿನ ಕಾಂಗ್ರೆಸ್ ಪಕ್ಷವನ್ನೇ ಹಣಿಯಲು ಜೆಡಿಎಸ್ ತಂತ್ರ ರೂಪಿಸಿದೆ. ಹೀಗಾಗಿ, ಕಾಂಗ್ರೆಸ್ ವರಿಷ್ಠರು ಕೂಡಲೇ ಸಚಿವ ಸಂಪುಟ ವಿಸ್ತರಿಸುವಂತರ ಸಿಎಂ ಹೆಚ್.ಡಿ.ಕೆ ಗೆ ಸೂಚಿಸಬೇಕೆಂದು ಆಗ್ರಹಿಸಲಿದ್ದಾರೆ ಎಂದ ತಿಳಿದು ಬಂದಿದೆ. ಇಲ್ಲವಾದಲ್ಲಿ ಮಂತ್ರಿಗಿರಿಯ ಬೆನ್ನು ಹತ್ತಿದವರು ಮತ್ತೆ ದೆಹಲಿ ಪೆರೇಡ್ ನಡೆಸುವುದರಲ್ಲಿ ನೋ ಡೌಟ್.