ಪ್ರಮುಖ ಸುದ್ದಿ
ಸೇವಾ ನಿರತರಿಗೆ ಉಚಿತ ಸ್ಯಾನಿಟೈಸರ್ ವಿತರಿಸಿದ ಉಕ್ಕಿನಾಳ
ಸೇವಾ ನಿರತರಿಗೆ ಉಚಿತ ಸ್ಯಾನಿಟೈಸರ್ ವಿತರಣೆ
ಶಹಾಪುರಃ ಕೊರೊನಾ ಹಾವಳಿಯಿಂದ ದೇಶದ ಜನ ತತ್ತರಿಸಿದ್ದು, ರಾಜ್ಯದಲ್ಲು ವ್ಯಾಪಕವಾಗಿ ಕೊರೊನಾ ತನ್ನ ಬಾಹುಬಂಧ ಚಾಚುತ್ತಿದೆ. ಈ ಹಿನ್ನೆಲೆ ನಗರದ ವಿವಿಧೆಡೆ ಐಸೋಲೆಷನ್ ವಾರ್ಡ್ ನಿರ್ಮಾಣ ಮಾಡಿದ್ದು,ಅಲ್ಲದೆ ಬಾಂಬೆ, ಪುಣೆ ಬೆಂಗಳೂರ ಸೇರಿದಂತೆ ಇತರಡೆ ತೆರಳಿದ್ದ ವಲಸಿಗ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ವಲಸಿಗರನ್ನು ನಗರದ ವಿವಿಧ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಈ ವೇಳೆ ಕರ್ತವ್ಯನಿರತ ಆರೋಗ್ಯ ಸಿಬ್ಬಂದಿಗೆ ಸ್ಯಾನಿಟರೈಸ್ಡ್ ಮತ್ತು ಮಾಸ್ಕ್ ಅಗತ್ಯವಿದೆ.
ಶಹಾಪುರ ಮಂಡಲ ಬಿಜೆಪಿ ಅಧ್ಯಕ್ಷ ರಾಜುಗೌಡ ಉಕ್ಕಿನಾಳ ತಮ್ಮ ಸ್ನೇಹಿತರೊಂದಿಗೆ ಸಮೀಪದ ಭೀಮರಾಯನ ಗುಡಿ ಆರೋಗ್ಯ ಕೇಂದ್ರದಲ್ಲಿ ವಲಸಿಗರನ್ನು ತಪಾಸಣೆ ಯಲ್ಲಿ ಸೇವಾನಿರತರಿಗೆ ಉಚಿತವಾಗಿ ಸ್ಯಾನಿಟೈಸರ್ ಬಾಟಲ್ ಮತ್ತು ಮಾಸ್ಕ್ ವಿತರಿಸಿದರು.