ಪ್ರಮುಖ ಸುದ್ದಿ

ಆಂದೋಲಾಶ್ರೀ ಬಂಧನ ಖಂಡಿಸಿ ನಾಳೆ ಶಹಾಪುರ ಬಂದ್ ಗೆ ಕರೆ

 

ಶ್ರೀಗಳ ಬೆಳವಣಿಗೆ ಸಹಿಸದ ಕೆಲವರ ಕುಮ್ಮಕ್ಕು-ಸೂಗುರೇಶ್ವರ ಶ್ರೀ ಖಂಡನೆ

ಯಾದಗಿರಿಃ ಜೇವರ್ಗಿಯ ಆಂದೋಲಾ ಗ್ರಾಮದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಎರಡು ಕೋಮಿನ ಮಧ್ಯೆ ಬಡಿದಾಟ ನಡೆದ ಘಟನೆಯಲ್ಲಿ ದುರುದ್ದೇಶದಿಂದ ಪ್ರಕರಣದಡಿಯಲ್ಲಿ ಆಂದೋಲಾ ಸ್ವಾಮಿಗಳ ಹೆಸರು ಸೇರಿಸಿ ಬಂಧಿಸಲಾಗಿದೆ. ಶ್ರೀಗಳ ಬಂಧನ ಖಂಡಿಸಿ ನಾಳೆ ನವೆಂಬರ್ 1ರಂದು ಶಹಾಪುರ ಬಂದ್ ಗೆ ಕರೆ ನೀಡಲಾಗಿದೆ. ಇಲ್ಲಿನ ವಿವಿಧ ಮಠಾಧೀಶರು ಮತ್ತು ಹಲವಾರು ಸಂಘನೆಗಳ ನೇತೃತ್ವದಲ್ಲಿ ಬುಧವಾರ  ಬಂದ್ ಆಚರಣೆಗೆ ಕರೆ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ನಗರದ ಕುಂಬಾರಗೇರಿ ಮಠದ ಶ್ರೀಸೂಗುರೇಶ್ವರ ಶಿವಾಚಾರ್ಯರು ವಿನಯವಾಣಿ ಜೊತೆ ಮಾತನಾಡಿ, ಆಂದೋಲಾ ಶ್ರೀಗಳ ಬಂಧನದ ಹಿಂದೆ ರಾಜಕೀಯ ಪ್ರೇರಿತ ಷಡ್ಯಂತರವಿದೆ. ವಿನಾಃಕಾರಣ ಓರ್ವ ಮಠದ ಸ್ವಾಮಿಗಳನ್ನು ಬಂಧಿಸಿ ಕಿರುಕುಳ ನೀಡಲಾಗುತ್ತಿದೆ, ಇದು ಅನ್ಯಾಯ. ಅಲ್ಲಿನ ಅಂಗಡಿಗಳ ತೆರವು ಕಾರ್ಯಾಚರಣೆ ತಾಲೂಕು ಆಡಳಿತ, ಸ್ಥಳೀಯ ಗ್ರಾ.ಪಂ ನೇತೃತ್ವದಲ್ಲಿ ನಡೆದಿದೆ.

ಆ ಸಂದರ್ಭದಲ್ಲಿ ಉಳಿದೆಲ್ಲ ಕೋಮಿನ ಜನರು ತಮ್ಮ ಅಂಗಡಿ, ಹೊಟೇಲ್‍ಗಳನ್ನು ತೆರವುಗೊಳಿಸಿದ್ದಾರೆ. ಆದರೆ ಒಂದೇ ಒಂದು ಕೋಮಿನ ಜನ ತಮ್ಮ ಅಂಗಡಿಯನ್ನು ತೆರವುಗೊಳಿಸದೆ, ತೆರವು ಕಾರ್ಯಾಚರಣೆ ಸಂದರ್ಭ ಸ್ಥಳದಲ್ಲಿದ್ದ ಒಂದು ಕೋಮಿನ ಹುಡುಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಆಗ ಗ್ರಾಮಸ್ಥರು ಸೇರಿ ಮಾರಣಾಂತಿಕ ಹಲ್ಲೆ ಖಂಡಿಸಿ ಮಾತನಾಡಲು ಹೋದಾಗ ಅವರ ಮೇಲೂ ಆ ಒಂದು ಕೋಮಿನ ಜನ ಹಲ್ಲೆ ನಡೆಸಿದ್ದಾರೆ. ಆಗ ಘರ್ಷಣೆ ಉಂಟಾಗಿದ್ದು ಎರಡು ಕೋಮಿನ ಮಧ್ಯೆ ಜಗಳವಾಗಿದೆ.

ಇದೆಲ್ಲ ಘಟನೆ ನಡೆಯುವಾಗ ಶ್ರೀಗಳು ಇರಲಿಲ್ಲ. ವಿನಾಕಾರಣ ಶ್ರೀಗಳನ್ನು ಈ ಪ್ರಕರಣದಲ್ಲಿ ಎಳೆ ತಂದು ಅಶಾಂತಿ ಉಂಟು ಮಾಡುತ್ತಿದ್ದಾರೆ ಮತ್ತು ಕೋಮು ಸಂಘರ್ಷದ ಕಿಡಿ ಹೊತ್ತಿಸುತ್ತಿದ್ದಾರೆ ಎಂದು ಶ್ರೀಸೂಗುರೇಶ್ವರ ಶಿವಾಚಾರ್ಯರು ಆಕ್ರೋಶ ವ್ಯಕ್ತಪಡಿಸಿದರು. ಕಾನೂನಾತ್ಮಕ ಹೋರಾಟ ನಡೆಸಲಿ. ಅದು ಸರ್ಕಾರದ ವಿರುದ್ಧ ನಡೆಸುವಂತಹದ್ದು, ತಾಲೂಕು ಆಡಳಿತ ವಿರುದ್ಧ ಕಾನೂನು ಹೋರಾಟ ನಡೆಸಲಿ. ಅದು ಬಿಟ್ಟು ಹೊಡೆದಾಟ ಸರಿಯಲ್ಲ. ಇಲ್ಲಿ ಯಾವ ಕೋಮಿನವರು ಶಾಂತಿ ಕದಡುವ ಮೂಲಕ ಸಂಚು ರೂಪಿಸಿದ್ದಾರೆ ಎಂಬುದನ್ನು ಪೊಲೀಸ್ ಅಧಿಕಾರಿಗಳು ಮನಗಾಣಬೇಕಿದೆ. ವ್ಯವಸ್ಥಿತ ಸಂಚಿಗೆ ಶ್ರೀಗಳನ್ನು ಬಲಿಪಶು ಮಾಡುವುದು ಸರಿಯಲ್ಲ. ಆ ಕಾರಣಕ್ಕೆ ನಾಳೆ ಎಲ್ಲಾ ಸಮಾಜ, ವಿವಿಧ ಮಠಾಧೀಶರು ಹಲವಾರು ಸಂಘಟನೆಗಳ ನೇತೃತ್ವದಲ್ಲಿ ಶಹಾಪುರ ಬಂದ್‍ಗೆ ಕರೆ ನೀಡಲಾಗಿದೆ. ಸಾರ್ವಜನಿಕರು ವ್ಯಾಪಾರಸ್ಥರು ಸ್ವಯಂ ಪ್ರೇರಣೆ ಮೂಲಕ ಬಂದ್ ಮಾಡುವ ಮೂಲಕ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ನಗರದ ಚರಬಸವೇಶ್ವರ ಕಮಾನದಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಯುವಕರು ಮಹಿಳೆಯರು ಸರ್ವ ಸಮಾಜದವರು ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕೆಂದು ಶ್ರೀಸೂಗುರೇಶ್ವರ ಶಿವಾಚಾರ್ಯರು ಕೋರಿದ್ದಾರೆ.

Related Articles

One Comment

Leave a Reply

Your email address will not be published. Required fields are marked *

Back to top button