ಪ್ರಮುಖ ಸುದ್ದಿ
ಫಲಿತಾಂಶಕ್ಕೂ ಮುನ್ನವೇ ರಾರಾಜಿಸುತ್ತಿರುವ ಜಗಮೋಹನರಡ್ಡಿ ಸಿಎಂ ಕಟೌಟಗಳು
ವೈಎಸ್ಆರ್ ಜಗಮೋಹನರಡ್ಡಿ ಸಿಎಂ ರಾರಾಜಿಸುತ್ತಿರುವ ಕಟೌಟಗಳು..
ಆಂದ್ರಪ್ರದೇಶಃ ಲೋಕಾಸಭೆ ಚುನಾವಣೆ ಜೊತೆಗೆ ಇಲ್ಲಿನ ವಿಧಾನಸಭೆ ಚುನಾವಣೆ ಸಹ ನಡೆಸಲಾಗಿತ್ತು. ಇಂದು ಲೋಕಾ ಜೊತೆಗೆ ವಿಧಾನಸಭೆ ಫಲಿತಾಂಶ ಹೊರಬೀಳಲಿದೆ.
ಹೀಗಾಗಿ ಇಲ್ಲಿನ ಅಮರಾವತಿ ನಗರದಲ್ಲಿ ವೈಎಸ್ಆರ್ ವಿಧಾನಸಭೆ ಸಂಪೂರ್ಣ ಬಹುಮತದೊಂದಿಗೆ ರಾಜ್ಯದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳಲಾಗುತ್ತಿದ್ದು,
ಅದಕ್ಕೆ ಪೂರಕವಾಗಿ ಇಲ್ಲಿನ ವೈಎಸ್ಆರ್ ಪಕ್ಷದ ಕಾರ್ಯಕರ್ತರು ವೈಎಸ್ಆರ್ ಜಗಮೋಹನ ರಡ್ಡಿ ಅಭಿಮಾನಿಗಳು ಈಗಾಗಲೇ ತಮ್ಮ ಪಕ್ಷ ಬಹುಮತದಿಂದ ಗೆಲ್ಲಲಿದೆ ಎಂಬ ಅಪಾರ ವಿಶ್ವಾಸದಿಂದ ತಮ್ಮ ವೈಎಸ್ ಆರ್ ನಾಯಕ ಜಗಮೋಹನರಡ್ಡಿ ಸಿಎಂ ಪ್ರಮಾಣವಚನ ಸಮಾರಂಭಕ್ಕೆ ಸ್ವಾಗತ ಎಂಬ ಬ್ಯಾನರ್ , ಕಟೌಟ್ ಗಳು ರಾರಜಿಸುತ್ತಿವೆ.