ಪ್ರಮುಖ ಸುದ್ದಿ
ಆಪರೇಷನ್ ಕಮಲ ಕರಗತ ಮಾಡಿಕೊಂಡ ಬಿಜೆಪಿ-ಸಿದ್ರಾಮಯ್ಯ ವಾಗ್ದಾಳಿ
ವಿವಿ ಡೆಸ್ಕ್ಃ ಮಹಾರಾಷ್ಟ್ರದಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಯಲ್ಲಿ ಅಚ್ಚರಿಯೇನಿಲ್ಲ. ಕರ್ನಾಟಕ ಬಿಜೆಪಿ ನಡೆಸಿದ್ದ ಆಪರೇಷನ್ ಕಮಲ ಮಹಾರಾಷ್ಟ್ರಕ್ಕೆ ವಿಸ್ತರಿಸಿದೆ ಫಡ್ನಾವಿಸ್ ಋಣ ತೀರಿಸಲು ಅಲ್ಲಿನ ಪಕ್ಷಾಂತರಿಗಳಿಗೆ ಕರ್ನಾಟಕದಲ್ಲಿ ಆಶ್ರಯ ನೀಡಿದರೆ ಅಚ್ಚರಿ ಇಲ್ಲ ಎಂದು ವಿಪಕ್ಷ ನಾಯಕ ಸಿದ್ರಾಮಯ್ಯ ಟ್ವಿಟ್‍ರನಲ್ಲಿ ಹರಿಹಾಯ್ದಿದಿದ್ದಾರೆ.
ಇನ್ನೂ ಬಿಜೆಪಿಗೆ ಶಾಸನ ಸಭೆಯಲ್ಲಿ ಬಹುಮತ ಬೇಕಿಲ್ಲ, ಇಡಿ, ಐಟಿ, ಸಿಬಿಐ ಕೈಯಲ್ಲಿದ್ದರೆ ಸಾಕು. ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವದ ಮೌಲ್ಯಗಳು, ವೈಯಕ್ತಿಕ ಚಾರಿತ್ರ್ಯ ಎಲ್ಲದಕ್ಕೂ ತಿಲಾಂಜಲಿ ನೀಡಿ ಸರ್ಕಾರ ರಚಿಸುವ ಕಲೆಯನ್ನು ಭಾರತೀಯ ಜನತಾ ಪಕ್ಷ ಕರಗತ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.