ಪ್ರಮುಖ ಸುದ್ದಿ
ರಾಜಕೀಯಕ್ಕೆ ಅಭಿಷೇಕ್ ಅಂಬರೀಶ ಎಂಟ್ರಿ..!
ರಾಜಕೀಯಕ್ಕೆ ಅಭಿಷೇಕ್ ಅಂಬರೀಶ ಎಂಟ್ರಿ..!
ವಿವಿ ಡೆಸ್ಕ್ಃ ಜನತೆ ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧಿಸುವೆ, ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಮಾನ ಅಭಿವೃದ್ಧಿ ಕೆಲಸವಾಗಬೇಕಿದೆ ಎಂದು ನಟ ಅಂಬರೀಶ್ ಅವರ ಪುತ್ರ ಯುವ ನಟ ಅಭಿಷೇಕ ಅಂಬರೀಶ್ ತಿಳಿಸಿದರು.
ಮದ್ದೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಜನರು ಬಯಸಿದರೆ ಸ್ಪರ್ಧೆ ಇಲ್ಲವಾದರೆ ಇಲ್ಲ. ಜನ ಸೇವೆ ರಾಜಕೀಯಕ್ಕೆ ಬಂದೇ ಮಾಡಬೇಕೆನ್ನುವದೇನಿಲ್ಲ ಎಂದಿದ್ದಾರೆ.
ಬರುವ ವಿಧಾನಸಭೆ ಚುನಾವಣೆ ಕಣಕ್ಕೆ ಅಭಿಷೇಕ್ ಪರೋಕ್ಷವಾಗಿ ಇಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಯಾವ ಪಕ್ಷ ಸೇರಿ ಕಣಕ್ಕಿಳಿಯುವರೋ ಗೊತ್ತಿಲ್ಲ. ಸೂಕ್ಷ್ಮ ಕ್ಷೇತ್ರ ತಯಾರಿಯಲ್ಲಿ ಇದ್ದಂತೆ ಕಾಣುತ್ತಿದೆ ಎನ್ನಲಾಗಿದೆ.