ಪ್ರಮುಖ ಸುದ್ದಿ
ಯಾದಗಿರಿಃ ಎಸಿಬಿ ಬಲೆಗೆ ಬಿದ್ದ ಡಿಎಚ್ಓ M.S.ಪಾಟೀಲ್.!
ಎಸಿಬಿ ಬಲೆಗೆ ಬಿದ್ದ ಡಿಎಚ್ಓ M.S.ಪಾಟೀಲ್.!
ಯಾದಗಿರಿಃ ಗುತ್ತಿಗೆ ಆಧಾರದ ಮೇಲೆ ನರ್ಸ್ ನೇಮಕಾತಿಗೆ ಬಂದಿದ್ದ ಅಭ್ಯರ್ಥಿಗಳಿಂದ ಇಲ್ಲಿನ ಆರೋಗ್ಯ ಇಲಾಖೆಯ ಡಿಎಚ್ಓ ಎಂ.ಎಸ್.ಪಾಟೀಲ್ 30 ಸಾವಿರ ಲಂಚ ಪಡೆಯುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ನರ್ಸ್ ನೇಮಕಾತಿಗೆ ತಲಾ ಒಬ್ಬರಿಂದ 30 ಸಾವಿರ ಬೇಡಿಕೆ ಇಟ್ಟಿದ್ದ ಎನ್ನಲಾದ ಡಿಎಚ್ಓ ಅವರನ್ನು ನೇಮಕಾತಿ ಸಂದರ್ಭ ಮುಂಚಿತವಾಗಿ ಎಸಿಬಿ ಅಧಿಕಾರಗಳಿಗೆ ದೂರು ನೀಡಿ ಆಗಮಿಸಿದ ಅಭ್ಯರ್ಥಿ ಓರ್ವರು ಡಿಎಚ್ ಓ ಲಂಚಾವತಾರ ಕುರಿತು ಬಯಲಿಗೆ ಎಳೆದಿದ್ದಾರೆ ಎನ್ನಲಾಗಿದೆ.
ಈ ಕುರಿತು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.