ಪ್ರಮುಖ ಸುದ್ದಿ
ಕಾಂಗ್ರೆಸ್ ಮುಖಂಡರ ನಡುವೆ ಮಾರಾಮಾರಿ.!
ತೆಲಗಿ ಅಳಿಯ ಇರ್ಫಾನ್ ಮತ್ತು ರಫೀಕ್ ವಾರಿಕಾರ ನಡುವೆ ಫೈಟ್
ಬೆಳಗಾವಿಃ ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಮುಖಂಡರು ನಡುಬೀದಿಯಲ್ಲಿ ಹೊಡೆದಾಟ ನಡೆಸಿದ ವಿಡಿಯೋ ಒಂದು ವೈರಲ್ ಆಗಿದೆ. ಇರ್ಫಾನ್ ತಾಳಿಕೋಟೆ ಮತ್ತು ರಫೀಕ್ ವಾರಿಮನಿ ನಡುವೆ ಮಾರಾಮಾರಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಮುಖಂಡರಿಬ್ಬರು ನಡುರಸ್ತೆಯಲ್ಲಿ ಹೊಡೆದಾಡಿಕೊಂಡಿರುವದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿದೆ ಎನ್ನಲಾಗಿದೆ.
ಜಿಲ್ಲೆಯ ಖಾನಾಪುರದಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಇರ್ಫಾನ್ ತಾಳಿಕೋಟೆ ಕರೀಂಲಾಲ್ ತೆಲಗಿ ಅಳಿಯನಾಗಿದ್ದು, ರಫೀಕ್ ವಾರಿಕಾರ್ ಮತ್ತು ಈತನ ನಡುವೆ ಯಾವ ಕಾರಣಕ್ಕೆ ಮಾರಾಮಾರಿ ನಡೆದಿದೆ ನಿಖರವಾಗಿ ತಿಳಿದು ಬಂದಿಲ್ಲ. ಈ ಇಬ್ಬರು ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದಾರೆ ಎನ್ನಲಾಗಿದೆ. ರಾಜಕೀಯ ಕಾರಣಕ್ಕೆ ಪರಸ್ಪರರ ನಡುವೆ ಬಡಿದಾಟ ನಡೆದಿದೆ ಎನ್ನಲಾಗಿದೆ.