ಪ್ರಮುಖ ಸುದ್ದಿ
ಮೂರು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಸಿಪಿಐ ಎಸಿಬಿ ಬಲೆಗೆ!
ಕಲಬುರಗಿ : ಜಪ್ತಿ ಮಾಡಲಾಗಿದ್ದ ಕಾರು ಬಿಡುಗಡೆ ಮಾಡಿಕೊಡಲು ನಗರದ ಅಶೋಕ ನಗರ ಠಾಣೆಯ ಸಿಪಿಐ ಬಸವರಾಜ್ ತೇಲಿ ಮೂರು ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದರಂತೆ. ಮಲ್ಲಿಕಾರ್ಜುನ್ ಎಂಬುವರಿಂದ ಇಂದು ನಗರದ ಡಿವೈಎಸ್ಪಿ ಕಚೇರಿ ಸಮೀಪ ಲಂಚದ ಹಣ ಸ್ವೀಕರಿಸುವ ವೇಳೆ ಡಿವೈಎಸ್ಪಿ ಕಲ್ಲದೇವರ್ ನೇತೃತ್ವದ ಎಸಿಬಿ ಟೀಮ್ ದಾಳಿ ನಡೆಸಿದೆ. ಲಂಚದ ಹಣದ ಸಮೇತ ಸಿಪಿಐ ಬಸವರಾಜ್ ರನ್ನು ರೆಡ್ ಹ್ಯಾಂಡಾಗಿ ಬಲೆಗೆ ಬಿದ್ದಿದ್ದಾರೆ.
ಸಿಪಿಐ ಬಸವರಾಜ್ ತೇಲಿ ವಿರುದ್ಧ ಲಂಚಕ್ಕೆ ಬೇಡಿಕೆ ಹಾಗೂ ಭ್ರಷ್ಟಾಚಾರದ ಆರೋಪ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲಂಚದ ಹಣ ಸಮೇತ ಸಿಕ್ಕಿಬಿದ್ದಿರುವ ಸಿಪಿಐ ಬಸವರಾಜ್ ತೇಲಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.