ಯಾದಗಿರಿಃ ಆಕಸ್ಮಿಕ ಗುಡಿಸಲಿಗೆ ಬೆಂಕಿ ಅಪಾರ ಹಾನಿ
ಸುರಪುರಃ ಗುಡಿಸಲಿಗೆ ಬೆಂಕಿ ದವಸ ಧಾನ್ಯ ಭಸ್ಮ
ಸಂಘ, ಸಂಸ್ಥೆಗಳ ಸಹಕಾರ, ಸಾಂತ್ವನ ಅಗತ್ಯ
ಯಾದಗಿರಿಃ ಜಿಲ್ಲೆಯ ಸುರಪುರ ತಾಲೂಕಿನ ಕುಂಬಾರಪೇಟೆಯಲ್ಲಿದ್ದ ಗುಡಿಸಲೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿ ಹುರಿದಿದ್ದು, ಗುಡಿಸಲಿನಲ್ಲಿಟ್ಟಿದ್ದ ದವಸ , ಧಾನ್ಯಗಳು ಸುಟ್ಟು ಹೋಗಿವೆ. ಅಂದಾಜು 50 ಸಾವಿರ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ಜರುಗಿದೆ.
ಅಂಬಲಪ್ಪ ದೊಡ್ಮನಿ ಎಂಬುವವರಿಗೆ ಸೇರಿದ ಗುಡಿಸಲು ಇದಾಗಿದ್ದು, ಮನೆಯಲ್ಲಿದ್ದ ಬಟ್ಟೆಬರೆ ಸೇರಿದಂತೆ ಇತರೆ ವಸ್ತುಗಳು ಹಾನಿಯುಂಟಾಗಿದೆ. ಈ ಕುರಿತು ಸುರಪುರ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ಜರುಗಿದೆ.
ನಿತ್ಯ ದುಡಿದ ಬದುಕು ಬಡವರ ಗುಡಿಸಲು ಬೆಂಕಿಗೆ ಆಹುತಿಯಾಗಿದ್ದು, ತಾಲೂಕು ದಂಡಾಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಲ್ಲದೆ ನೊಂದ ಕುಟುಂಬಸ್ಥರಿಗೆ ಸೂರಿನ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಕನ್ನಡಪರ ಸಂಘಟನೆ, ಸಂಘ, ಸಂಸ್ಥೆಗಳು ಇಂತಹ ಪರಿಸ್ಥಿತಿಯಲ್ಲಿ ನೊಂದ ಜೀವಿಗಳಿಗೆ ಸಹಕಾರ ನೀಡುವುದು ಬಹು ಮುಖ್ಯವಾಗಿದೆ. ಬಡ ಜೀವಿಗಳ ನೋವಿಗೆ ಯಾವ ಸಂಘಟನೆಗಳು, ಅಧಿಕಾರಿಗಳು ಮತು ಜನಪ್ರತಿನಿಧಿಗಳು ಸಾಂತ್ವನ, ಸಹಕಾರ ನೀಡಲಿವೆ ಎಂಬುದನ್ನು ಗಮನಾರ್ಹ ವಿಷಯವಾಗಿದೆ,