ಪ್ರಮುಖ ಸುದ್ದಿ
ಭೀಕರ ಅಪಘಾತ : ಸಾರಿಗೆ ಬಸ್ ಗೆ ಲಾರಿ ಡಿಕ್ಕಿ
ತುಮಕೂರು: ಶಿರಾ ತಾಲೂಕಿನ ಜೋಗಿಹಳ್ಳಿ ಸಮೀಪ ಬೆಳಗಿನ ಜಾವದಲ್ಲಿ ಲಾರಿ , ಸಾರಿಗೆ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. 10ಜನ ಗಾಯಗೊಂಡಿದ್ದು ಮೂವರ ಸ್ಥಿತಿ ಚಿಂತಾಜನಕವಾಗಿದೆ. ಶ್ರೀನಿವಾಸ ಪುರ ದಿಂದ ಬಳ್ಳಾರಿಗೆ ತೆರಳುತಿದ್ದ ಬಸ್ ನಲ್ಲಿ 22ಜನ ಪ್ರಯಾಣಿಸುತ್ತಿದ್ದರು.
ಚಾಲಕ ಅಬ್ದುಲ್ ಸಲಾಂ (59) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಗಾಯಳುಗಳು ಶಿರಾ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.