ಪ್ರಮುಖ ಸುದ್ದಿ
ಎತ್ತಿನ ಬಂಡಿಗೆ ಗೂಡ್ಸ್ ವಾಹನ ಡಿಕ್ಕಿ ಮೂವರ ಸಾವು
ಎತ್ತಿನ ಬಂಡಿಗೆ ಗೂಡ್ಸ್ ವಾಹನ ಡಿಕ್ಕಿ ಮೂವರ ಸಾವು
ಕಲಬುರ್ಗಿಃ ಹೊಲದಿಂದ ಮರಳಿ ಮನೆಗೆ ಎತ್ತಿನ ಬಂಡಿಯಲ್ಲಿ ಕುಟುಂಬವೊಂದು ಸಾಗುತ್ತಿರುವಾಗ ಹಿಂಬದಿಯಿಂದ ಗೂಡ್ಸ್ ವಾಹನವೊಂದು ಡಿಕ್ಮಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಡ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಕಟ್ಟೋಳಿ ಗ್ರಾಮ ಸಮೀಪ ನಡೆದಿದೆ.
ಹುಮನಾಬಾದ್ ದಿಂದ ಹೊರಟಿದ್ದ ಗೂಡ್ಸ್ ವಾಹನ ಎತ್ತಿನ ಬಂಡಿಗೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಬಂಡಿಯಲ್ಲಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಸ್ಳಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.