ಪ್ರಮುಖ ಸುದ್ದಿ
ಬೈಕಿಗೆ ಕಾರ್ ಡಿಕ್ಕಿ, ದಂಪತಿ ಮತ್ತು ಮಗು ಸಾವು : ಸ್ಥಳೀಯರಿಂದ ಕಾರಿಗೆ ಬೆಂಕಿ
ಬಳ್ಳಾರಿ : ತಾಲ್ಲೂಕಿನ ಅಲ್ಲೀಪುರ ಗ್ರಾಮದ ಸಮೀಪ ಬೈಕಿಗೆ ಕಾರು ಡಿಕ್ಕಿಯಾಗಿದೆ. ಪರಿಣಾಮ ಬೈಕಿನಲ್ಲಿದ್ದ ದಂಪತಿ ಮತ್ತು ಮಗ ಮೂವರೂ ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ. ಮೃತರನ್ನು ಅಲ್ಲೀಪುರ ಗ್ರಾಮದ ನಿವಾಸಿಗಳಾದ ಶ್ರೀನಿವಾಸ್ ಪತ್ನಿ ವೀಣಾ ಮತ್ತು ಪುತ್ರ ಸಂತೋಷ ಎಂದು ಗುರುತಿಸಲಾಗಿದೆ.
ಭೀಕರ ಅಪಘಾತದಲ್ಲಿ ದಂಪತಿ ಮತ್ತು ಮಗ ಸಾವಿಗೀಡಾದದ್ದನ್ನು ಕಂಡು ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಕಾರಿಗೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ಹೊಸಪೇಟೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಿ ಅಪಘಾತ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ.