ಪ್ರಮುಖ ಸುದ್ದಿ
ಟಿಪ್ಪರ್ – ಬೈಕ್ ನಡುವೆ ಡಿಕ್ಕಿ, ಓರ್ವನ ಸಾವು
ಯಾದಗಿರಿ: ಬೈಕ್ ಸವಾರ ತನ್ನ ಪಾಡಿಗೆ ತಾನು ಸೈಡ್ ನಲ್ಲಿ ಹೊರಟಿದ್ದಾಗ ಅತಿವೇಗದಿ ಎದುರಿಗೆ ಬಂದ ಮರಳು ತುಂಬುವ ಟಿಪ್ಪರ್ ತಪ್ಪು ಮಾರ್ಗದಿ ಬಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಹತ್ತಿಗುಡುರ ಬಳಿ ನಡೆದಿದೆ.
ಮೃತರನ್ನು ಕನ್ಯಾಕೋಳೂರು ಗ್ರಾಮದ ಮಡಿವಾಳಪ್ಪ ಅಗಸರ (50) ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಶಹಾಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಹಾಪುರ ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.