ಪ್ರಮುಖ ಸುದ್ದಿ
ಹಿಟ್ & ರನ್, ಬೈಕಿನಲ್ಲಿದ್ದ ASI ಸ್ಥಳದಲ್ಲೇ ಸಾವು!
ಕಲಬುರಗಿ: ಅಪರಿಚಿತ ವಾಹನ ಡಿಕ್ಕಿಯಾಗಿ ASI ಅಂಬಣ್ಣ(55) ಸ್ಥಳದಲ್ಲೇ ಅಸುನೀಗಿದ ಘಟನೆ ನಿನ್ನೆ ರಾತ್ರಿ ಕಲಬುರಗಿ ತಾಲೂಕಿನ ನಂದೂರು ಸಮೀಪದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಕಲಬುರಗಿಯ ರಾಜಾಪುರ ನಿವಾಸಿ ಆಗಿರುವ ಅಂಬಣ್ಣ ಶಹಬಾದ್ ಪೊಲೀಸ್ ಠಾಣೆಯ ASI ಆಗಿದ್ದರು. ಹೀಗಾಗಿ, ಕರ್ತವ್ಯ ನಿಮಿತ್ಯ ಕಲಬುರಗಿಯಿಂದ ಶಹಾಬಾದ್ ಗೆ ಬೈಕಿನಲ್ಲಿ ಹೊರಟಿದ್ದಾಗ ದುರ್ಘಟನೆ ನಡೆದಿದೆ.
ಬೈಕಿಗೆ ಡಿಕ್ಕಿ ಹೊಡೆದ ಬಳಿಕ ವಾಹನ ನಿಲ್ಲಿಸದೆ ಚಾಲಕ ಎಸ್ಕೇಪ್ ಆಗಿದ್ದಾನೆ. ಬೈಕಿನಲ್ಲಿದ್ದ ವ್ಯಕ್ತಿಯ ಸ್ಥಿತಿಯೇನಾಗಿದೆ. ಆಸ್ಪತ್ರೆಗೆ ಸಾಗಿಸಿದರೆ ಬದುಕುಳಿಯಬಲ್ಲರೇ ಎಂಬುದನ್ನು ಯೋಚಿಸದೆ ಮಾನವೀಯತೆ ಮರೆತು ಚಾಲಕ ಹಿಟ್ ಅಂಡ್ ರನ್ ಮಾಡಿದ್ದಾನೆ. ಕಲಬುರಗಿ ನಗರದ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.