ಪ್ರಮುಖ ಸುದ್ದಿ
ಬಸ್ – ಟಂಟಂ ನಡುವೆ ಡಿಕ್ಕಿ ಮೂವರ ಸ್ಥಿತಿ ಗಂಭೀರ
ಬಸ್ ಮತ್ತು ಟಂಟಂ ಆಟೋ ನಡುವೆ ಡಿಕ್ಕಿ ಹಲವರಿಗೆ ಗಂಭೀರ ಗಾಯ
ಯಾದಗಿರಿಃ ಶಹಾಪುರ ತಾಲೂಕಿನ ನಾಯ್ಕಲ್ ಹತ್ತಿರದ ಅಟಲ್ ರಾಕ್ ಶಾಲೆ ಎದುರು ಹೆದ್ದಾರಿ ಮೇಲೆ ಟಂಟಂ ಆಟೋವೊಂದಕ್ಕೆ ಸರ್ಕಾರಿ ಬಸ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರ ಸ್ಥಿತಿ ಗಂಭೀರವಿದೆ ಎನ್ನಲಾಗಿದೆ.
ಯಾದಗಿರಿಯಿಂದ ಕುರಕುಂದಕ್ಕೆ ಹೊರಟಿದ್ದ ಎನ್ನಲಾದ ಟಂಟಂ ಆಟೊವೊಂದಕ್ಕೆ ಯಾದಗಿರಿಗೆ ಹೊರಟಿದ್ದ ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಗಂಭೀರ ಸ್ಥಿತಿಯಲ್ಲಿರುವ ಮೂವರನ್ನು ಯಾದಗಿರಿ ಸರ್ಕಾರಿ ಆಸ್ಪತ್ರಗೆ ದಾಖಲಿಸಲಾಗಿದೆ. ಎಂದು ಪ್ರತ್ಯಕ್ಷದರ್ಶಿತಿಳಿಸಿದ್ದಾರೆ.