ಪ್ರಮುಖ ಸುದ್ದಿ
ಮಮತಾ ದೀದಿ, ರಾಹುಲ್ ದಾದಾ ರಾಜಕೀಯ ಪ್ರವಾಸಿಗರು – ತೇಜಸ್ವಿಸೂರ್ಯ ಟೀಕಾ ಪ್ರಹಾರ

ಗೋವಾದ ಜನತೆ ರಾಜಕೀಯ ಪ್ರವಾಸಿಗರನ್ನ ದೂರವಿಡಲಿದೆ – ತೇಜಸ್ವಿಸೂರ್ಯ ಟೀಕೆ
ಪಣಜಿಃ ರಾಹುಲ್ ಗಾಂಧಿ ಅವರು ಸದ್ಯ ಗೋವಾಕ್ಕೆ ಆಗಮಿಸಿರುವದು ಏಕೆ ಗೊತ್ತಾ.? ಥೈಲಾಂಡ್ ನಲ್ಲಿ ಕೊರೊನಾ ದಿಂದಾಗಿ ಲಾಕ್ ಡೌನ್ ಜಾರಿಗೊಳಿಸಿದ ಕಾರಣ ಪ್ರವಾಸಿಗರಿಗೆ ಎಂಟ್ರಿ ಇಲ್ಲ, ಆ ಕಾರಣಕ್ಕೆ ಅವರು ಗೋವಾಕ್ಕೆ ಪ್ರವಾಸಿಗರಾಗಿ ಬಂದಿದ್ದಾರೆ ಎಂದು ಬಿಜೆಪಿಯ ಯುವ ಬೆಂಕಿಚಂಡು, ಸಂಸದ ತೇಜಸ್ವಿಸೂರ್ಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಠೀಕಾ ಪ್ರಹಾರ ನಡೆಸಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಮತ್ತು ರಾಹುಲ್ ಗಾಂಧಿ ಇಬ್ಬರು ಆಮ್ ಆದ್ಮಿಯಂತೆ ಗೋವಾ ಪ್ರವಾಸಕ್ಕೆ ಬಂದಿದ್ದಾರೆ. ಥೈಲಾಂಡ್ ನಲ್ಲಿ ಪ್ರವೇಶವಕಾಶವಿಲ್ಲ. ಇವರು ರಾಜಕೀಯ ಪ್ರವಾಸಿಗರು ಎಂದು ಗೇಲಿ ಮಾಡಿದರು.
ಮುಂದುವರೆದು ಮಾತನಾಡಿದ ಅವರು, 2022 ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.