ಪ್ರಮುಖ ಸುದ್ದಿ
ಮಮದಾಪುರ ಕ್ರಾಸ್ ಬಳಿ ಅಪಘಾತ, ನಾಲ್ವರ ದುರ್ಮರಣ
ಮಮದಾಪುರ ಕ್ರಾಸ್ ಬಳಿ ಅಪಘಾತ, ನಾಲ್ವರ ದುರ್ಮರಣ
ಗೋಕಾಕ್ಃ ತಾಲೂಕಿನ ಮಮದಾಪುರ ಕ್ರಾಸ್ ಬಳಿ ನಡೆದ ಅಪಘಾತವೊಂದರಲ್ಲಿ ನಾಲ್ಕು ವರ್ಷದ ಹೆಣ್ಣು ಮಗು, ಇಬ್ಬರು ಮಹಿಳೆಯರು ಮತ್ತು ಓರ್ವ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.
ಟಾಟಾ ಏಸ್ ಮತ್ತು ಕಾರ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಕಾರ್ ನಲ್ಲಿದ್ದವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತರೆಲ್ಲರೂ ರಾಮದುರ್ಗ ಸಮೀಪದ ಗ್ರಾಮದವರೆನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
