ಪ್ರಮುಖ ಸುದ್ದಿ
ಅಪಘಾತಃ ವರ್ಮಾ ಸೇಟ್ ಗೆ ಗಂಭೀರ ಗಾಯ ಆಸ್ಪತ್ರೆ ದಾಖಲು
ಕಾರು ಅಪಘಾತಃ ಚಿನ್ನ ಬೆಳ್ಳಿ ವ್ಯಾಪಾರಿ ವರ್ಮಾ ಸೇಟ್ ಜಿಗೆ ಗಂಭೀರ ಗಾಯ
ಯಾದಗಿರಿಃ ಆಕಳೊಂದು ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹಳ್ಳಕ್ಕೆ ಬಿದ್ದ ಪರಿಣಾಮ ಕಾರ್ ಮಾಲೀಕ ಗಂಭೀರ ಗಾಯಗೊಂಡ ಘಟನೆ ಸುರಪುರ ಸಮೀಪದ ಕವಡಿಮಟ್ಟಿ ಹತ್ತಿರ ನಡೆದಿದೆ.
ಫೋರ್ಡ್ ಕಾರ್ ನಲ್ಲಿ ಶಹಾಪುರದಿಂದ ಹುಬ್ಬಳ್ಳಿಗೆ ಹೊರಟಿದ್ದ ನಗರದ ಚಿನ್ನ ಬೆಳ್ಳಿ ವ್ಯಾಪಾರಿ ಸರಾಫ್ ಸಂಘದ ಅಧ್ಯಕ್ಷ ವಿಜಯಕುಮಾರ ವರ್ಮಾ (ವರ್ಮಾ ಸೇಟ್) ಎಂಬುವರೇ ಗಂಭೀರಗಾಯಗೊಂಡಿದ್ದು ಹೆಚ್ವಿನ ಚಿಕಿತ್ಸೆಗಾಗಿ ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಸಂದರ್ಭದಲ್ಲಿ ಫೋರ್ಡ್ ಕಾರ್ ನ ಬಲೂನ್ ಜಾಗೃತಗೊಂಡಿರುವ ಕಾರಣ ಅದೃಷ್ಟ ಪ್ರಾಣಪಾಯದಿಂದ ಪಾರಾಗಿದ್ದಾರೆ ಎನ್ನಬಹುದು. ಚಾಲಕ ನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.