ಅಪಘಾತಃ ಚಿತಾಪುರದ 9 ಜನರ ಸಾವು
ಕ್ರೂಸರ್-ಕ್ಯಾಂಟರ್ ಡಿಕ್ಕಿ 9 ಜನರ ದುರ್ಮರಣ
ಸಿಂದಗಿ : ಕ್ರೂಸರ್ ಮತ್ತು ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಪರಿಣಾಮ ಗೋವಾ ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದ 9 ಜನರು ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆ ಸಿಂದಗಿಯ ಚಿಕ್ಕಸಿಂದಗಿಯಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಮೃತರು ಕಲಬುರಗಿ ಜಿಲ್ಲೆಯ ಚಿತ್ತಾಪುರ ಗ್ರಾಮದವರು ಎಂದು ತಿಳಿದು ಬಂದಿದೆ. ಇವರೆಲ್ಲರೂ ಕ್ರೂಸರ್ನಲ್ಲಿ ಗೋವಾ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ವಾಪಸ್ಸಾಗುವಾಗ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ಸಾಗರ್ (25), ಚಾಂದಪಾಷಾ (24), ಅಜೀಮ್ (26), ಅಂಬರೀಶ್ (28), ಶಾಕೀರ್ (25), ಶ್ರೀನಾಥ (30), ಯುನೂಸ್ (30), ಗುರು (32), ಮಾಂಗಸಾಬ್ (29) ಎಂದು ಗುರುತಿಸಲಾಗಿದೆ. ಮಲ್ಲಿಕಾರ್ಜುನ, ಮಂಜು, ಸದ್ದಾಂ, ಸಾಜೀದ್ ಇಸ್ಮಾಯಿಲ್, ಕ್ಯಾಂಟರ್ ಚಾಲಕ ಆಕಾಶ ದೊರೆ, ಕ್ಲೀನರ್ ಆನಂದ ಸೊಪೇಟಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಜಯಪುರ ಪೋಲಿಸ ವರಿಷ್ಠಾದಿಕಾರಿಗಳು ಪ್ರಕಾಶ ನಿಕಂ ಅಪಘಾತ ಗೊಂಡ ಸ್ಥಳವನ್ನು ಪರೀಶಿಲಿಸಿ ಗಾಯಾಳುಗಳ ಯೋಗ ಕ್ಷೇಮ ಪರಿಶೀಲನೆ ನಡೆಸಿ ಆಗಿರುವ ಅಪಘಾತಕ್ಕೆ ಕಾರಣಯೇನು ಅನ್ನುವದನ್ನು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ
ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.