ಮಿನಿ ಲಾರಿ-ಬುಲೇರೋ ಡಿಕ್ಕಿ ವ್ಯಕ್ತಿ ಸಾವು
ಮಿನಿಲಾರಿ-ಬೋಲೇರೋ ಮಧ್ಯೆ ಅಪಘಾತ ಹೋಮ್ ಗಾರ್ಡ ಸಾವು
ಲಿಂಗಸೂಗೂರಃ ಮಿನಿ ಲಾರಿ ಮತ್ತು ಬುಲೇರೋ ನಡುವೆ ಡಿಕ್ಕಿ ಸಂಭವಿದ ಕಾರಣ ಓರ್ವ ವ್ಯಕ್ತಿ ಪಟ್ಟಿದ್ದು ಇನ್ನೋರ್ವ ಬಾಲಕ ತೀವ್ರ ಗಾಯಗೊಂಡ ಘಟನೆ ಅಮರೇಶ್ವರ ಕ್ರಾಸ್ ಹತ್ತಿರ ನಡೆದಿದೆ.
ಅಪಘಾತದಲ್ಲಿ ಯಾದಗಿರಿ ನಗರದ ಸಂಗಮೇಶ(೪೦) ಎಂಬಾತನೇ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಈತ ಹೋಮ್ ಗಾರ್ಡ ವೃತ್ತಿ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಘಟನೆಯಲ್ಲಿ ಬಾಲಕ ನಿಹಾಲ್ ದೇಶಮುಖ ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಗೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಗೃಹರಕ್ಷಕ ದಳದ ಕಮಾಂಡೆಂಟ್ ಪ್ರವೀಣ ದೇಶಮುಖ ತಂದೆ ಚಂದ್ರಕಾಂತರಾವ್ ಮತ್ತು ಇವರ ಮಗ ನಿಹಾಲ್ ದೇಶಮುಖ ಹಾಗೂ ಹೋಮ್ ಗಾರ್ಡ ಸಂಗಮೇಶ ಇವರು ಗೃಹ ರಕ್ಷಕ ದಳದ ವಾಹನದಲ್ಲಿ ಯಾದಗಿರಿಯಿಂದ ಬಳ್ಳಾರಿಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ತೆರಳುತ್ತಿದ್ದರು ಎನ್ನನಲಾಗಿದೆ.
ಲಿಂಗಸುಗೂರು ಕಡೆಯಿಂದ ಬರುತ್ತಿದ್ದ ಮಿನಿಲಾರಿ ಮತ್ತು ಯಾದಗಿರಿ ಕಡೆಯಿಂದ ಬರುತ್ತಿದ್ದ ಗೃಹರಕ್ಷಕ ದಳದ ಬೋಲೇರೋ ವಾಹನ ಮಧ್ಯೆ ಅಪಘಾತ ಸಂಭವಿಸಿ ದುರ್ಘಟನೆ ನಡೆದಿದೆ. ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.