ಪ್ರಮುಖ ಸುದ್ದಿ
ಟಂಟಂ – ಲಾರಿ ಡಿಕ್ಕಿ ಓರ್ವ ಮಹಿಳೆ ಸಾವು
ಟಂಟಂ ಮತ್ತು ಲಾರಿ ಮುಖಾಮುಕಿ ಡಿಕ್ಕಿ
ಓರ್ವ ಮಹಿಳೆ ಸಾವು 8 ಮಂದಿಗೆ ಗಾಯ
ಯಾದಗಿರಿಃ ಕೂಲಿ ಕೆಲಸಕ್ಕೆಂದು ಟಂಟಂ ಆಟೋವೊಂದರಲ್ಲಿ ತೆರಳುತ್ತಿತುವಾಗ ಟಂಟಂಗೆ ಎದುರಿನಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದು 8 ಜನ ಗಾಯಗೊಂಡ ಘಟನೆ ಜಿಲ್ಲೆಯ ಸುರಪುರ ನಗರದ ಹೊರ ವಲಯದಲ್ಲಿ ನಡೆದಿದೆ.
ಘಟನೆಯಲ್ಲಿ ನಿಂಗವ್ವ (55) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಮೃತ ಮಹಿಳೆ ಸೇರಿದಂತೆ ಗಾಯಗೊಂಡವರು ಸುರಪುರ ಪಟ್ಟಣದ ಕುಂಬಾರಪೇಟ್ ನಿವಾಸಿಗಳು ಎನ್ನಲಾಗಿದೆ.
ಟಂಟಂನಲ್ಲಿ ಎಲ್ಲರೂ ಜಮೀನಿಗೆ ಕೂಲಿ ಕೆಲಸಕ್ಕೆಂದು ಹೊರಟಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.