ಪ್ರಮುಖ ಸುದ್ದಿ
ಬಿಜೆಪಿ ಸೇರ್ತಾರಾ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್? ಲಿಂಗಸೂಗೂರಿನಲ್ಲಿ ಬಿಎಸ್ ವೈ ಹೇಳಿದ್ದೇನು?
ರಾಯಚೂರು: ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ಸೇರಿದಂತೆ ಅನೇಕರು ನಮ್ಮ ಸಂಪರ್ಕದಲ್ಲಿದ್ದಾರೆ ಸೂಕ್ತ ಸಂದರ್ಭದಲ್ಲಿ ನಮ್ಮ ಸಂಪರ್ಕದಲ್ಲಿರುವವರು ಭಾರತೀಯ ಜನತಾ ಪಕ್ಷ ಸೇರುವ ಬಗ್ಗೆ ನಿರ್ಧಾರವಾಗಲಿದೆ ಎಂದು ಎಂದು ಲಿಂಗಸೂಗೂರು ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಹಿಂದೆ ಬಿಜೆಪಿಯಲ್ಲಿದ್ದ ಶಾಸಕ ಮಾನಪ್ಪ ವಜ್ಜಲ್ ಮರಳಿ ಬಿಜೆಪಿಗೆ ಸೇರ್ತಾರಂತೆ ಎಂಬ ಊಹಾಪೋಹಗಳು ಬಹುದಿನಗಳಿಂದ ಚರ್ಚೆಗೀಡಾಗಿದ್ದವು. ಇದೇ ಸಂದರ್ಭದಲ್ಲಿ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ವೈ ಹೇಳಿಕೆ ನೀಡಿದ್ದು ಈ ಭಾಗದ ರಾಜಕೀಯ ನಾಯಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಮಾನಪ್ಪ ವಜ್ಜಲ್ ಬಿಜೆಪಿ ಸೇರುತ್ತಾರೆಂಬ ಸುದ್ದಿ ರಾಯಚೂರು ಭಾಗದಲ್ಲಿ ಪಕ್ಷಾಂತರ ರಾಜಕೀಯ ಗರಿಗೆದರುವಂತೆ ಮಾಡಿದೆ.