BREAKING ಬೈಕ್ ಅಪಘಾತಃ ಮಹಿಳೆ ಸಾವು, 5 ವರ್ಷ ಮಗು & ಸವಾರನಿಗೆ ಗಾಯ
ಸಗರ ಬಳಿ ರಸ್ತೆ ಅಪಘಾತ- ಮಹಿಳೆ ಸಾವು
ಬೈಕ್ ಅಪಘಾತಃ ಮಹಿಳೆ ಸಾವು, 5 ವರ್ಷ ಮಗು & ಸವಾರನಿಗೆ ಗಾಯ
ಸಗರ ಬಳಿ ರಸ್ತೆ ಅಪಘಾತ- ಮಹಿಳೆ ಸಾವು
ಶಹಾಪುರಃ ಬೆಳ್ಳಂಬೆಳಗ್ಗೆ ಬೈಕ್ ಸವಾರನೊಬ್ಬ ರಸ್ತೆ ಬದಿಯಲಿ ಹಾಕಲಾದ ಕೀ.ಮೀ.ಅಡಿಗಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜರುಗಿದೆ ಸಗರ ಗ್ರಾಮಕ್ಕೆ ತೆರಳುವ ಮಾರ್ಗ ಪೆಟ್ರೋಲ್ ಬಂಕ್ ಹತ್ತಿರ ನಡೆದಿದೆ.
ಮೃತ ಮಹಿಳೆ ಶಾರದಹಳ್ಳಿ ಗ್ರಾಮದ ಪಾರ್ವತಿ (26) ಎಂದು ಗುರುತಿಸಲಾಗಿದೆ.
ಬೈಕ್ ಸವಾರ ಶರಣಪ್ಪ ಸೇರಿದಂತೆ 5 ವರ್ಷದ ಮಗು ಪರುಶರಾಮ ಗಾಯಗೊಂಡಿದ್ದು ಶಹಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆ ವಿವರಃ ಶಾರದಳ್ಳಿ ಗ್ರಾಮ ನಿವಾಸಿಯಾದ ಪಾರ್ವತಿ (26) ತನ್ನ ಮಗು ಪರುಶರಾಮ ಜತೆ ಸಗರ ಗ್ರಾಮ ಸಮೀಪವಿರುವ ಗ್ಯಾಸ್ ಸಿಲೆಂಡರ್ ವಿತರಣಾ ಕೇಂದ್ರದಲ್ಲಿ ಕೆವೈಸಿ ಮಾಡಿಸಲು ಹೊರಟಿದ್ದಳು ಮಾರ್ಗ ಮಧ್ಯ ಬೈಕ್ ಮೇಲೆ ಹೊರಟಿದ್ದ ಪರಿಚಯಸ್ಥ ಶರಣಪ್ಪನನ್ನ ನಿಲ್ಲಿಸಿ ಕೆವೈಸಿ ಮಾಡಿಸಲು ಹೊರಟಿರುವೆ ಅಲ್ಲಿವರೆಗೆ ಬಿಡಪ್ಪ ಎಂದು ಕೇಳಿದ್ದಾಳೆ.
ಆಯ್ತು ಎಂದು ಬೈಕ್ ಮೇಲೆ ಕುಳ್ಳರಿಸಿಕೊಂಡು ಹೊರಟಿದ್ದಾಗ ಆಯ ತಪ್ಪಿ ಸವಾರ ರಸ್ತೆ ಬದಿ ಬೋಟ್ ಗಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಸದ್ಯ ಸವಾರ ಶರಣಪ್ಪ ತೀವ್ರಗಾಯಗೊಂಡ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಕಲ್ಬುರ್ಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಮೃತ ಪಾರ್ವತಿಯ 5 ವರ್ಷದ ಮಗು ತಲೆಗೆ ಪೆಟ್ಟಾಗಿದ್ದು ಶಹಾಪುರ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಮೃತ ಮಹಿಳೆಯ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.