ಪ್ರಮುಖ ಸುದ್ದಿ
ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಯುವಕ ಸಾವು
ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಯುವಕ ಸಾವು
ಶಹಾಪುರಃ ಬೈಕ್ ವೊಂದಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ತೀವ್ರ ರಕ್ತಸ್ರಾವ ಹೊಂದಿ ಮೃತಪಟ್ಟಿದ್ದು, ಹಿಂಬದಿ ಕುಳಿತ ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಹತ್ತಿಗುಡೂರ ಸಮೀಪ ನಡೆದಿದೆ.
ಬೈಕ್ ಮೇಲೆ ಇಬ್ಬರು ಯುವಕರು ಶಹಾಪುರ ಪಟ್ಟಣಕ್ಕೆ ಹೊರಟಿದ್ದಾಗ ವಾಹನವೊಂದು ಡಿಕ್ಕಿ ಹೊಡೆದು ಹೋದ ಪರಿಣಾಮ ದುರ್ಘಟನೆ ನಡೆದಿದೆ.
ಮನೋಜಕುಮಾರ(17) ಎಂಬ ಯುವಕನೇ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಘಟನೆಯಲ್ಲಿ ತೀವ್ರರಕ್ತಸ್ರಾವ ಹೊಂದಿದ್ದ ಸವಾರನನ್ನು ಆಸ್ಪತ್ರೆಗೆ ಸಾಗಿಸುವ ಮಧ್ಯ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.