ಪ್ರಮುಖ ಸುದ್ದಿ
ರಸ್ತೆ ಅಪಘಾತ ಬೈಕ್ ಸವಾರ ಸಾವು
ಶಹಾಪುರದಲ್ಲಿ ಅಪಘಾತ ಬೈಕ್ ಸವಾರ ಸಾವು
ಶಹಾಪುರಃ ಟ್ರ್ಯಾಕ್ಟರ್ ಸಾಲ ಪಾವತಿಸಲೆಂದು ಬೈಕ್ ಮೇಲೆ ಶಹಾಪುರ ಪಟ್ಟಣಕ್ಕೆ ಆಗಮಿಸುತ್ತಿರುವಾಗ ಮಾರ್ಗ ಮಧ್ಯ ಭೀಮರಾಯನ ಗುಡಿ ಬಾಪುಗೌಡ ಸರ್ಕಲ್ ಬಳಿ ಡಿಸೇಲ್ ಟ್ಯಾಂಕರ್‍ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ವಿಶ್ವನಾಥ ತಂದೆ ಮಾನಯ್ಯ ಗೊಡ್ರಿಹಾಳ ತಾಲೂಕಿನ ವನದುರ್ಗಾ ಗ್ರಾಮ ನಿವಾಸಿಯಾಗಿದ್ದು, ತಮ್ಮ ಟ್ರ್ಯಾಕ್ಟರ್ ಸಾಲ ಕಟ್ಟಲು ಆಗಮಿಸುವಾ ದುರ್ಘನೆ ನಡೆದಿದೆ.
ಡಿಸೇಲ್ ಟ್ಯಾಂಕರ್ ಚಾಲಕ ನಿಯಂತ್ರಣ ತಪ್ಪಿ ಬೈಕ್‍ಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದ್ದು, ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಭೀ.ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಟ್ಯಾಂಕರ್ ವಶಕ್ಕೆ ಪಡೆದುಕೊಂಡಿದ್ದಾರೆ.