ಪ್ರಮುಖ ಸುದ್ದಿ
ಶಹಾಪುರಃ ಪರಸ್ಪರ ಲಾರಿ ಡಿಕ್ಕಿ ಓರ್ವ ಚಾಲಕ ಸಾವು
ಪರಸ್ಪರ ಲಾರಿ ಡಿಕ್ಕಿ ಓರ್ವ ಚಾಲಕನ ಸಾವು ಇನ್ನೋರ್ವ ಆಸ್ಪತ್ರೆಗೆ ದಾಖಲು
ಶಹಾಪುರಃ ಪರಸ್ಪರ ಎರಡು ಲಾರಿಗಳು ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಲಾರಿ ಚಾಲಕ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ತಾಲೂಕಿನ ಅರಳಳ್ಳಿ ಕ್ರಾಸ್ ಹತ್ತಿರ ರವಿವಾರ ರಾತ್ರಿ ನಡೆದಿದೆ.
ಮೂಲತಃ ಬಸವಕಲ್ಯಾಣದ ನಿವಾಸಿಯಾದ ಆನಂದ ಶಿವಪ್ಪ (38) ಎಂಬ ಚಾಲಕನೇ ಮೃತ ದುರ್ದೈವಿಯಾಗಿದ್ದಾನೆ.
ಗುಜರಾತ ಮೂಲದ ಇನ್ನೋರ್ವ ಲಾರಿ ಚಾಲಕ ಬಿನ್ನೋದ್ ಎಂಬಾತಿನಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಕುರಿತು ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಗ್ರಾಮೀಣ ಸಿಪಿಐ ವೀರಣ್ಣ ದೊಡ್ಮನಿ ತಿಳಿಸಿದ್ದಾರೆ.