ಎತ್ತಿನಗಾಡಿಗೆ ಲಾರಿ ಡಿಕ್ಕಿ : ರೈತ ಕುಟುಂಬದ ಏಳು ಜನ ಸಾವು!
ಬಾಗಲಕೋಟೆ : ಜಿಲ್ಲೆಯ ಹುನಗುಂದ ತಾಲ್ಲೂಕಿನ ರಕ್ಕಸಗಿ ಗ್ರಾಮದ ಸಮೀಪ ಎತ್ತಿನಗಾಡಿಕೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಎತ್ತಿನಗಾಡಿಯಲ್ಲಿದ್ದ ಒಂದೇ ಕುಟುಂಬದ ಏಳು ಜನ ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆ ನಡೆದಿದೆ. ರೈತ ಕುಟುಂಬ ಕೃಷಿ ಕಾಯಕ ಮುಗಿಸಿಕೊಂಡು ಧವಸ ಧಾನ್ಯದ ಚೀಲಗಳೊಂದಿಗೆ ಗ್ರಾಮಕ್ಕೆ ಮರಳುತ್ತಿದ್ದರು. ಆದರೆ, ರಕ್ಕಸಗಿ ಗ್ರಾಮದ ಸಮೀಪ ರಕ್ಕಸನ ರೂಪದಲ್ಲಿ ಬಂದ ಲಾರಿ ಏಳು ಜನರ ಬಲಿ ಪಡೆದಿದೆ.
ಮೃತರನ್ನು ಕಾಶಮ್ಮ ಹಿರೇಮಠ (30), ಚಂದ್ರಯ್ಯ ಹಿರೇಮಠ (56), ವಿಜಯಲಕ್ಷ್ಮೀ ಹಿರೇಮಠ (23), ಚಂದ್ರಯ್ಯ ಹಿರೇಮಠ (40), ರತ್ನವ್ವ ಹಿರೇಮಠ (40) , ಗಂಗಮ್ಮ ಹೂಗಾರ ( 58), ಸಿದ್ದಮ್ಮ ಹೂಗಾರ್ (60) ಹಾಗೂ ಬಸಮ್ಮ ಹೂಗಾರ್ (55) ಎಂದು ಗುರುತಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಅಮೀನಘಡ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಚಾಲಕ ಸ್ಥಳದಲ್ಲೇ ಲಾರಿ ಬಿಟ್ಟು ಎಸ್ಕೇಪ್ ಆಗಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ನಿಖರವಾದ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.