ಪ್ರಮುಖ ಸುದ್ದಿ

ಕಡ್ಡಾಯವಾಗಿ ಹೆಲ್ಮೆಟ್ ಧರಿಸಲು ಸಿಪಿಐ ನಾಗರಾಜ ಜಿ. ಕರೆ

ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ

ಯಾದಗಿರಿಃ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಜಿಲ್ಲೆಯ ಶಹಾಪುರ ನಗರ ಠಾಣೆ ಪೊಲೀಸರು ಶುಕ್ರವಾರ ನಗರದ ಬಸವೇಶ್ವರ ವೃತ್ತದಲ್ಲಿ ರಸ್ತೆ ಸುರಕ್ಷತಾ ಕುರಿತು ಕರಪತ್ರ ಹಂಚುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ನಾಗರಾಜ ಜಿ, ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹಿಂಬದಿ ಕುಳಿತವರು ಹೆಲ್ಮೆಟ್ ಧರಿಸಿರಬೇಕು. ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನ ಚಲಿಸುವಾಗ ಮಧ್ಯಪಾನ ಮಾಡಿರಬಾರದು. ನಿಮ್ಮ ಜೀವ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ ಜೀವ ಉಳಿಸಿಕೊಳ್ಳಿ. ನಿಮ್ಮ ನಂಬಿದ್ದ ಕುಟುಂಬದ ಬಗ್ಗೆ ಯೋಚನೆ ಇದ್ದಲ್ಲಿ ನೀವು ಸುರಕ್ಷತಾ ನಿಯಮ ಪಾಲಿಸಿ ಎಂದು ತಿಳಿಸಿದರು.

ಅಲ್ಲದೆ ವಾಹನ ಚಲಿಸುವಾಗ ಮೊಬೈಲ್ ಬಳಕೆ ಬೇಡ. ಪಾದಚಾರಿಗಳು ಪಾದಚಾರಿ ಮಾರ್ಗ ಬಳಸಬೇಕು. ವಾಹನಗಳಲ್ಲಿ ಅಧಿಕ ಭಾರ ಮತ್ತು ಹೆಚ್ಚು ಪ್ರಯಾಣಿಕರನ್ನು ಕುಳಿಸಿಕೊಂಡು ಚಲಿಸುವುದು ಬೇಡ. ಅದು ಅಪಾಯಕ್ಕೆ ಆಹ್ವಾನವಿಟ್ಟಂತೆ. ನೀವು ಜೀವ ಕಳೆದುಕೊಳ್ಳುವ ಜೊತೆ ಎದುರಿಗೆ ಬರುವ ಸಂಚಾರಿ ನಿಯಮ ಪಾಲಿಸುವ ಅಥವಾ ಪಾದಚಾರಿ ಜೀವವನ್ನು ಹೋಗಬಹುದು.

ಯಾರ ಜೀವವೇ ಆಗಲಿ ಅತ್ಯಮುಲ್ಯವಾದದು, ಕಾರಣ ಎಲ್ಲರೂ ಸಂಚಾರಿ ನಿಯಮವನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಅಪಘಾತಗಳನ್ನು ತಡೆಯಬಹುದು. ಕಮಿಷ್ಟ ಪಕ್ಷ ಜೀವ ಉಳಿಸಕೊಳ್ಳಬಹುದು ಎಂಬುದನ್ನು ಮರೆಯಬೇಡಿ ಎಂದು ನಾಗರಿಕರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಪೊಲೀಸರು, ಬೈಕ್ ಸವಾರರು ಸಂಚಾರಿಗಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button